ಸಿನಿಮಾ, ಧಾರವಾಹಿಗಳಲ್ಲಿ ಇನ್ಮುಂದೆ ಪೊಲೀಸ್ ಪಾತ್ರ ಮಾಡಲು ಅನುಮತಿ ಕಡ್ಡಾಯ..!
ಸಿನಿಮಾದಲ್ಲಿ ಯಾವುದೇ ಪಾತ್ರ ಮಾಡಬೇಕಾದರೂ ಕೂಡ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಬೇಕು.. ಇಲ್ಲವಾದರೆ ಆ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಬೇಕು.. ಸಿನಿಮಾಗಳಲ್ಲಿ ಬರುವ ಪಾತ್ರಗಳು ನಿಜ ಜೀವನದಲ್ಲೂ ಕೂಡ ಯಾರದ್ದೋ ಪಾತ್ರವಾಗಿರುತ್ತದೆ. ಸಿನಿಮಾಗಳಲ್ಲಿ ಪಾತ್ರಗಳು ಅನ್ನೋದು ತುಂಬಾನೇ ಮುಖ್ಯ.. ಅದರಲ್ಲಿ ಪೊಲೀಸ್ ಪಾತ್ರ ಕೂಡ ಒಂದು..
ಆದರೆ ಇನ್ಮುಂದೆ ಸಿನಿಮಾ,ಧಾರವಾಹಿಗಳಲ್ಲಿ ಪೊಲೀಸ್ ಪಾತ್ರವನ್ನು ತೆರೆ ಮೇಲೆ ಬರುವುದಕ್ಕೂ ಮುನ್ನ ಅದಕ್ಕೆ ಸಂಬಂಧಪಟ್ಟ ಸಂಭಾಷಣೆಯನ್ನು ಪೋಲಿಸ್ ಇಲಾಖೆಗೆ ನೀಡಿ, ಆ ಸಂಭಾಷಣೆಗೆ ಅನುಮತಿ ಸಿಕ್ಕ ಬಳಿಕ ಪೋಲಿಸ್ ಪಾತ್ರ ಮಾಡಲು ಅವಕಾಶ ನೀಡುವುದರ ಬಗ್ಗೆ ಗೃಹ ಇಲಾಖೆಯಲ್ಲಿ ವ್ಯಾಪಾಕ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ..ಸಿನಿಮಾ ಮತ್ತು ಧಾರವಾಹಿಗಳಲ್ಲಿ ಪೊಲೀಸರ ಕೆಟ್ಟದಾಗಿ ಬಿಂಬಿಸುತ್ತಿರುವ ಹಿನ್ನಲೆ ಪೋಲಿಸ್ ಪಾತ್ರಗಳನ್ನು ಮಾಡುವ ಮುನ್ನ ಇಲಾಖೆಯಿಂದ ಕಡ್ಡಾಯ ಅನುಮತಿ ಪಡೆಯುವುದಕ್ಕೆ ಚಿಂತನೆ ನಡೆಸಿದೆ ಎನ್ನಲಾಗಿದೆ.
Comments