108 ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ: ತಾಯಿ ಮಗು ಇಬ್ಬರು ಸುರಕ್ಷಿತ

ಕೆಲವೊಮ್ಮೆ ಗರ್ಭಿಣಿಯರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆದ್ರೆ ನೂರೊಂದು ನೋವು ಬರುತ್ತದೆ. ಅದಂತೆ ಇದಂತೆ ಅಂತ ಹೇಳ್ತಾರೆ..ಆದರೆ ಆಸ್ಪತ್ರೆಯಲ್ಲಿ 108 ವಾಹನದಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವಾಗ ತುಂಬು ಗರ್ಭಿಣಿ ಮಾರ್ಗ ಮಧ್ಯೆಯೇ ಹೆರಿಗೆಯಾಗಿರುವ ಘಟನೆ ನಡೆದಿದೆ.
ಸಿಂದಗಿ ತಾಲೂಕಿನ ದೇವೂರ ಗ್ರಾಮದ ಸಂಗೀತಾ ಪವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದೇವರ ಹಿಪ್ಪರಗಿಯಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮಾರ್ಗ ಮಧ್ಯೆ ವಾಹನದಲ್ಲೇ ವಿಜಯಪುರ ನಗರದ ಗೋಳಗುಮ್ಮಟ ಬಳಿ ಹೆರಿಗೆ ಆಗಿದೆ. ಸದ್ಯಕ್ಕೆ ತಾಯಿ ಮಗು ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
Comments