ಆಯುಧ ಪೂಜೆ ನಿಲ್ಲಿಸಿ ಬೆಂಗ್ಳೂರಿಗೆ ಪ್ರಯಾಣ ಬೆಳೆಸಿದ್ದೇಕೆ ಪ್ರಮೋದಾದೇವಿ..!?
ಇಂದು ಎಲ್ಲೆಡೆ ಸಂಭ್ರಮದಿಂದ ಆಯುಧಪೂಜೆ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಇಂದು ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಅವರು ನಿಲ್ಲಿಸಿ ದಿಢೀರ್ ಬೆಂಗಳೂರಿಗೆ ರಾಜವಂಶಸ್ಥೆ ಪ್ರಮೋದಾದೇವಿ ಪ್ರಯಾಣವನ್ನು ಬೆಳೆಸಿದ್ದಾರೆ.
ರಾಜವಂಶಸ್ಥೆಯಾದ ವಿಶಾಲಾಕ್ಷಿ ದೇವಿಯವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ದಿಢೀರ್ ಆಗಿ ಪ್ರಮೋದಾದೇವಿ ಅವರು ಬೆಂಗಳೂರಿಗೆ ಬಂದಿದ್ದಾರೆ. ವಿಶಾಲಕ್ಷಿದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಂಗಿಯಾಗಿದ್ದು, ಸಂಬಂಧದಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ನಾದಿನಿಯಾಗಬೇಕು. ಆದ್ದರಿಂದ ನಾದಿನಿ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಹೊರಟಿದ್ದಾರೆ.
Comments