ಹಂಪಿ ಶ್ರೀ ವಿರೂಪಾಕ್ಷನ ದರ್ಶನಕ್ಕೆ ಬಂತು ವಸ್ತ್ರಸಂಹಿತೆ ನೀತಿ..!?

ಭಾರತದಲ್ಲಿರುವ ಅನೇಕ ಪ್ರಮುಖ ದೇವಾಲಯಗಳಲ್ಲಿ ಈಗಾಗಲೇ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ಇದೀಗ ಹಂಪಿ ವಿರೂಪಾಕ್ಷ ದೇವಾಲಯದಲ್ಲೂ ಕೂಡ ವಸ್ತ್ರ ಸಂಹಿತೆ ನೀತಿಯನ್ನು ಅನುಷ್ಠಾನಕ್ಕೆ ತರಲು ದೇಗುಲದ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.
ಈ ವಿಷಯವಾಗಿ ಬಳ್ಳಾರಿ ಉಪ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಅಲ್ಲಿನ ಒಪ್ಪಿಗೆಗಾಗಿ ಕಾಯುತ್ತಾ ಇದ್ದಾರೆ. ತೆಳುವಾದ ಮತ್ತು ತುಂಡುಡುಗೆಗಳನ್ನು ಧರಿಸಿ ದೇಗುಲಗಳಿಗೆ ಭೇಟಿ ನೀಡುವ ಪುರುಷ ಹಾಗೂ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೂಜೆ ಹಾಗೂ ಸಂಬಂಧಿತ ಧಾರ್ಮಿಕ ಆಚರಣೆಗಳು ಸಮಸ್ಯೆಯಾಗುವುದರಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್ ತಿಳಿಸಿದ್ದಾರೆ.
Comments