ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ: ಪ್ರತ್ಯೇಕ ವಿಮಾ ಯೋಜನೆಗೆ ಚಿಂತನೆ

ಈಗಾಗಲೇ ರಾಜ್ಯ ಸರ್ಕಾರವು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ರಾಜ್ಯ ಸರ್ಕಾರವು ರೈತ ಸ್ನೇಹಿಯಾಗಿರುವ ಪ್ರತ್ಯೇಕ ವಿಮಾ ಯೋಜನೆಯನ್ನು ಜಾರಿಗೆ ತರುವ ಚಿಂತನೆಯಲ್ಲಿದೆ ಎಂದು ಕೃಷಿ ಸಚಿವರಾದ ಶಿವಶಂಕರ್ ರೆಡ್ಡಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಫಸಲ್ ಬಿಮಾಯೋಜನೆಯಲ್ಲಿ ಆಗುತ್ತಿರುವ ತೊಡಕು ನಿವಾರಣೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಆಯಾ ವರ್ಷವೇ ಪರಿಹಾರ ವಿಮೆ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸುವ ಯೋಚನೆಯಲ್ಲಿದೆ. ಕೇಂದ್ರ ವಿಮೆಗೆ ನಿಗದಿಪಡಿಸಿರುವ ಮಾನದಂಡಗಳಿಗೆ ರೈತರಿಂದ ಆಕ್ಷೇಪ ವ್ಯಕ್ತವಾಗಿದೆ ಎಂದು ಕೃಷಿ ಸಚಿವರಾದ ಶಿವಶಂಕರ್ ರೆಡ್ಡಿ ತಿಳಿಸಿದರು.
Comments