ನಗರದ 5,938 ಸ್ಥಳಗಳಲ್ಲಿ ಉಚಿತ ವೈಫೈ ಸೌಲಭ್ಯ..!

ಬಿಬಿಎಂಪಿಯು ಸಿಲಿಕಾನ್ ಸಿಟಿ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ, ಮಹಾನಗರದ ಜನರಿಗೆ ಉಚಿತ ವೈಫೈ ಸೇವೆ ನೀಡಲು ಬಿಬಿಎಂಪಿಯು 5,938 ಸಾರ್ವಜನಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದು ಇನ್ನು ಒಂದು ತಿಂಗಳಲ್ಲಿ ಉಚಿತ ಇಂಟರ್ ನೆಟ್ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ಸ್ಥಳದಲ್ಲಿದ್ದಾಗ ಬಿಬಿಎಂಪಿಯು ಜನರು ಇಂಟರ್ ನೆಟ್ ಬಳಸಲು ಅನುಕೂಲವಾಗುವಂತೆ ಉಚಿತ ವೈಫೈ ಯೋಜನೆ ರೂಪಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಜನರು ಹೆಚ್ಚು ಹೊತ್ತು ನಿಲ್ಲುವ ಸ್ಥಳಗಳಲ್ಲಿ ವೈಫೈ ಸೇವೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ನಾಲ್ಕು ಕಂಪನಿಗಳ ಜೊತೆ ಬಿಬಿಎಂಪಿ ಮಾತನಾಡಿದ್ದು, ನಿರಂತರ ವೈಫೈ ಸೇವೆ ನೀಡುವುದಾಗಿ ಒಪ್ಪಿಕೊಂಡಿವೆ. ಒಂದೇ ತಿಂಗಳಲ್ಲಿ 5,938 ಸಾರ್ವಜನಿಕ ಸ್ಥಳಗಳಲ್ಲಿ ಉಚಿತ ವೈಫೈ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
Comments