ಸಾಲಕ್ಕಾಗಿ ಬೆಡ್ ರೂಂಗೆ ಕರೆದ ಬ್ಯಾಂಕ್ ಮ್ಯಾನೇಜರ್‌’ಗೆ ನಡುರಸ್ತೆಯಲ್ಲೆ ಬಿತ್ತು ಹಿಗ್ಗಾಮುಗ್ಗಾ ಗೂಸಾ..! ವಿಡಿಯೋ ವೈರಲ್

16 Oct 2018 12:30 PM | General
1054 Report

ಊರಲ್ಲಿ ಹೋಗೋ ಮಾರಿನ ಮನೆಗೆ ಕರೆದರಂತೆ.. ಹಾಗ್ ಆಗಿದೆ ನೋಡಿ ಈ ಬ್ಯಾಂಕ್ ಮ್ಯಾನೆಜರ್ ಕಥೆ.. ಡಿಎಚ್‍ಎಫ್‍ಎಲ್ ಬ್ಯಾಂಕಿನ ಮ್ಯಾನೇಜರ್ ದೇವಯ್ಯ ಎನ್ನುವವರು ಮಹಿಳೆಯನ್ನು ಮಂಚಕ್ಕೆ ಕರೆದು ನಡು ಬೀದಿಯಲ್ಲಿ ಒದೆ ತಿಂದಿರುವ ಘಟನೆ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ನಡೆದಿದೆ.  

ಮಹಿಳೆಯೊಬ್ಬರು ಲಕ್ಷ ರೂಪಾಯಿ ಬ್ಯಾಂಕ್ ಲೋನ್ ನೀಡುವಂತೆ ಮ್ಯಾನೇಜರ್ ದೇವಯ್ಯ ಬಳಿ ಮನವಿ ಮಾಡಿಕೊಂಡಿದ್ದಾರೆ.. ಲೋನ್ ವಿಚಾರ ಮಾತನಾಡುವುದಾಗಿ ದೇವಯ್ಯ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದಾನೆ..ಇನ್ನು ಲೋನ್ ಸಿಗುತ್ತದೆ ಎನ್ನುವ ಆಸೆಯಿಂದ ಮ್ಯಾನೇಜರ್ ಮನೆಗೆ ತೆರಳಿದ್ದ ಸುಮಾಗೆ ಶಾಕ್ ಆಗಿತ್ತು..ಮನೆಗೆ ಹೋಗುತ್ತಿದ್ದಂತೆ ದೇವಯ್ಯ ಮನೆಯ ಬಾಗಿಲನ್ನು ಹಾಕಿ, ಬೆಡ್‍ರೂಂಗೆ ಕರೆದಿದ್ದಾನೆ..ಇದರಿಂದ ರೊಚ್ಚಿಗೆದ್ದ ಸುಮಾ ಕೈಗೆ ಸಿಕ್ಕ ದೊಣ್ಣೆಯಿಂದ ಹಿಗ್ಗಾ-ಮುಗ್ಗಾ ಥಳಿಸಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನನ್ನು ವಶಕ್ಕೆ ಪಡೆದು, ಮಹಿಳಾ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆಯನ್ನು ನಡೆಸುತ್ತಿದ್ದಾರೆ.

Edited By

Manjula M

Reported By

Manjula M

Comments