ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಆದಾಯ ಮಿತಿ ಹೆಚ್ಚಿಸಿದ ರಾಜ್ಯ ಸರ್ಕಾರ

ಈಗಾಗಲೇ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ನಾನಾ ರೀತಿಯ ಪ್ರಯೋಜನಗಳನ್ನು ಹಾಗೂ ಯೋಜನೆಗಳನ್ನು ರೂಪಿಸಿದ್ಧಾರೆ. ಇದೀಗ ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಮತ್ತೊಂದು ಗುಡ್ ನ್ಯೂಸ್ ನೀಡಿದೆ. ರಾಜ್ಯದ ಅಲ್ಪ ಸಂಖ್ಯಾತರ ಹಾಸ್ಟೆಲ್, ವಸತಿ ಶಾಲೆ ಸೇರಬಯಸುವ ವಿದ್ಯಾರ್ಥಿಗಳ ಕುಟುಂಬದ ಆದಾಯ ಮಿತಿಯನ್ನು 2.50 ಲಕ್ಷ ರೂ.ಗೆ ಹೆಚ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ..
ಈವರೆಗೂ ಇದ್ದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹಾಸ್ಟೆಲ್ ಸೇರ್ಪಡೆಗೆ 44,000 ರೂ. ಮತ್ತು ವಸತಿ ಶಾಲೆ ಪ್ರವೇಶಕ್ಕೆ 1 ಲಕ್ಷ ರೂ. ಆದಾಯ ಮಿತಿ ಇತ್ತು. ಇದೀಗ ಮಿತಿ ಹೆಚ್ಚಳದಿಂದ ಇನ್ನಷ್ಟು ವಿದ್ಯಾರ್ಥಿಗಳು ಹಾಸ್ಟೆಲ್, ವಸತಿ ಶಾಲೆ ಪ್ರವೇಶ ಭಾಗ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.. ಅಲ್ಪಸಂಖ್ಯಾತರ ಕೋಟಾದಲ್ಲಿ ಬರುವ ಪ್ರವರ್ಗ 1 ರಲ್ಲಿನ ಬರುವ ನದಾಫ್, ಪಿಂಜಾರ್, ಚಪ್ಪರ್ ಬಂದ್, ಕಸಾಬಾ, ಪೂಲ್ಮಾಲಿ (ಮುಸ್ಲಿಂ) ಪ್ರವರ್ಗ 2-ಎ, 2-ಬಿ, 3-ಬಿ, ಪಾರ್ಸಿ, ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಆದಾಯ ಪರಿಷ್ಕರಣೆ ಆದೇಶದ ಪ್ರಯೋಜನ ದೊರೆಯಲಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.
Comments