ಡಿಸಿ ರೋಹಿಣಿ ಸಿಂಧೂರಿಯ ದಿಟ್ಟಹೆಜ್ಜೆಗೆ ನಡುಗಿ ಹೋದ ಅಕ್ರಮ ಕಟ್ಟಡ ಮಾಲೀಕರು

ಬಿಎಂ ರಸ್ತೆಯ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ಪ್ರಾರಂಭವಾಗಿದೆ. ಮಹಿಳಾ ಡಿಸಿ ರೋಹಿಣಿ ಸಿಂಧೂರಿ ಇಟ್ಟ ದಿಟ್ಟ ಹೆಜ್ಜೆಗೆ ಅಕ್ರಮ ಕಟ್ಟಡಗಳ ಮಾಲೀಕರು ನಡುಗಿಹೋಗಿದ್ದಾರೆ.. ಹಾಸನ ನಗರದ ಬಿಎಂ ರಸ್ತೆಯ ಒತ್ತುವರಿ ಕಟ್ಟಡಗಳಿಗೆ ಮಾರ್ಕಿಂಗ್ ಕಾರ್ಯ ಪ್ರಾರಂಭವಾಗಿದೆ. ಡಿಸಿ ರೋಹಿಣಿ ಸಿಂಧೂರಿ ದಿಟ್ಡ ಹೆಜ್ಜೆಗೆ ನಲುಗಿದ ಅಕ್ರಮ ಕಟ್ಟಡ ಮಾಲೀಕರು ಗಾಬರಿಗೊಂಡಿದ್ದಾರೆ.
ಬಿಎಂ ರಸ್ತೆಯ ಪ್ರಸಿದ್ಧ ಕಟ್ಟಡಗಳು ನೆಲಸಮ ಆಗುವ ವೇಳೆ ಹತ್ತಿರವಾಗುತ್ತಿದೆ. ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿ ಛೀಮಾರಿ ಹಾಕಿಸಿಕೊಂಡು ವಾಪಾಸಾಗಿದ್ದ ಅಕ್ರಮ ಕಟ್ಟಡ ಮಾಲೀಕರಿಗೆ ಡಿಸಿ ರೋಹಿಣಿ ಸಿಂಧೂರಿ ಬಿಗ್ ಶಾಕ್ ನೀಡಿದ್ದಾರೆ. ಅಕ್ರಮ ಎಂದು ತಿಳಿದರೂ ನಗರಸಭೆಯಿಂದ ಪರವಾನಗಿ ನೀಡಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹೈಕೋರ್ಟ್ ಆದೇಶವನ್ನು ನೀಡಿದೆ. ಹೀಗಾಗಿ ಡಿಸಿ ರೋಹಿಣಿ ಸಿಂಧೂರಿ ಅಕ್ರಮ ಕಟ್ಟಡಗಳ ತೆರವಿಗೆ ದಿಟ್ಟ ಕ್ರಮ ಕೈಗೊಂಡಿದ್ದಾರೆ.. ಈ ಹೆಣ್ಣು ಮಗಳ ಸಾಧನೆಗೆ ಎಲ್ಲರೂ ಮೆಚ್ಚಲೇಬೇಕು.
Comments