ಮೈಸೂರು ದಸರದಲ್ಲೂ ಶುರುವಾಯ್ತು ಬೀದಿ ಕಾಮಣ್ಣರ ಕಾಟ

ಮೈಸೂರಿನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಹಬ್ಬದ ಪ್ರಯುಕ್ತ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಈ ವೇಳೆಯಲ್ಲಿ ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು ಭಾನುವಾರ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಕೆಲವರು ತಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ನಡೆದ ಓಪನ್ ಸ್ಟ್ರೀಟ್ ಫೆಸ್ಟಿವಲ್’ಗೆ ಸಾವಿರಾರು ಮಂದಿ ಬಂದಿದ್ದರು, ಈ ವೇಳೆ ಜನರ ಮಧ್ಯೆ ಕೆಲ ಕಾಮುಕರು ಸೇರಿಕೊಂಡು ಯುವತಿಯರನ್ನು ಉದ್ದೇಶವಾಗಿ ಮೈಕೈ ಮುಟ್ಟಿ ನಂತರ ಕ್ಷಮೆ ಕೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ. ಈ ರೀತಿ ಮಾಡುವುದರಿಂದ ನಾಡಹಬ್ಬ ಮೈಸೂರು ದಸರಾಗೆ ಕೆಟ್ಟ ಹೆಸರು ಬರುತ್ತದೆ.
Comments