ಈ ಕಾರ್ಡ್ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 1 ಲಕ್ಷ ರೂ. ಉಚಿತ..! ಹೇಗೆ ಅಂತಿರಾ..?

ಕೆಲವರು ಈಗಾಗಲೇ ಕಾರ್ಮಿಕರ ಕಾರ್ಡ್ ನ್ನ ಮಾಡಿಸಿಕೊಂಡಿದ್ದಾರೆ, ಇನ್ನು ಕೆಲವರಿಗೆ ಈ ಕಾರ್ಡ್ ನಮಗೆ ಸಿಗುತ್ತದೆಯೋ ಇಲ್ಲವೋ ಅನ್ನುವ ಸಂಶಯವಿರುತ್ತದೆ.. ಈ ಕಾರ್ಡ್ ಇದ್ದವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಚಿಕಿತ್ಸೆಗಾಗಿ ಹಣ, 60 ವರ್ಷದ ನಂತರ ಪಿಂಚಣಿ ಯೋಜನೆ ಮತ್ತು ಕುಟುಂಬದ ಸದಸ್ಯರು ಯಾರಾದರೂ ಸತ್ತರೆ ಮಣ್ಣು ಖರ್ಚು ಅಂತ 25000 ರೂಪಾಯಿ ಉಚಿತವಾಗಿ ಸರ್ಕಾರದಿಂದ ಈ ಕಾರ್ಡ್ ಇರುವವರಿಗೆ ಸಿಗುತ್ತದೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡರೆ ಸರ್ಕಾರದಿಂದ ನಿಮಗೆ ಸಾಕಷ್ಟು ಸೌಕರ್ಯ ಸಿಗಲಿದೆ.
ಕಾರ್ಮಿಕರ ಕಾರ್ಡ್ ಯಾವ ಯಾವ ಕೆಲಸ ಮಾಡುವವರಿಗೆ ಸಿಗುತ್ತದೆ ಅಂದರೆ, ನಿರ್ಮಾಣ ಕೆಲಸ, ಮಾರ್ಪಾಡು ಕೆಲಸ ರಿಪೇರಿ ಕೆಲಸ, ಕಟ್ಟಡ ಕೆಡುವುದು, ಕಾಮಗಾರಿ ಸಂಬಂದಿಸಿದ ಕೆಲಸಗಳು, ನೀರಾವರಿ, ಚರಂಡಿ, ಆಣೆಕಟ್ಟು, ವಿದ್ಯುತ್ ಉತ್ಪಾದನೆ, ಸುರಂಗ, ಸೇತುವೆ ಕೆಲಸ ಹೀಗೆ ಹಲವಾರು ಕೆಲಸ ಮಾಡುವವರಿಗೆ ಈ ಕಾರ್ಮಿಕರ ಕಾರ್ಡ್ ದೊರೆಯಲಿದೆ. ನೀವು ಕೂಡ ಈ ಕಾರ್ಮಿಕ ಕಾರ್ಡ್ ಪಡೆಯಬೇಕೆಂದರೆ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ನಿಮ್ಮ ಹತ್ತಿರದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕ ಕಾರ್ಡ್ ಗೆ ಅರ್ಜಿಯನ್ನು ನೀಡಬೇಕು. ಇದರ ಜೊತೆ ನೀವು ಕೆಲಸ ಮಾಡುವ ಕಂಟ್ರಾಕ್ಟರ್ ನ ಸಹಿ ಅಥವಾ ಸೀಲ್ ಹಾಕಿಸಿ ಕೊಡಬೇಕು. ಅರ್ಜಿ ಸಲ್ಲಿಸಿದ ಸುಮಾರು ಒಂದು ತಿಂಗಳಲ್ಲೇ ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯಲ್ಲೇ ನಿಮ್ಮ ಕಾರ್ಮಿಕ ಕಾರ್ಡ್ ಸಿಗುತ್ತದೆ, ಸ್ನೇಹಿತರೆ ಇದರಲ್ಲಿ ಇಬ್ಬರು ಮಕ್ಕಳ ಹೆಸರನ್ನ ಮಾತ್ರ ಸೇರಿಸಬಹುದು, ಆ ಎರಡು ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಮತ್ತು ಮದುವೆಗೆ ಎರಡು ಮಕ್ಕಳಿಗೆ ಸೇರಿಸಿ 1 ಲಕ್ಷ ರೂಪಾಯಿ ಸಿಗುತ್ತದೆ.
Comments