ಮಹಾಲಯ ಅಮಾವಾಸ್ಯೆ ದಿನ ಕಣ್ಣು ಬಿಟ್ಟ ಭದ್ರಕಾಳಿ ದೇವಿ..! ವಿಡಿಯೋ ವೈರಲ್
ಮಹಾಲಯ ಅಮಾವಾಸ್ಯೆಯಲ್ಲಿ ಭದ್ರಕಾಳಿ ದೇವಿ ಕಣ್ಣುಬಿಟ್ಟಿರುವ ವಿಚಿತ್ರ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೆಂಡೆಕರೆಯಲ್ಲಿ ನಡೆದಿದೆ ಎನ್ನಲಾಗಿದೆ.
ದೇವರು ಕಣ್ಣು ಬಿಟ್ಟ ದೃಶ್ಯ ಮೊಬೈಲ್’ ಕ್ಯಾಮರಾದಲ್ಲಿ ಸೆರೆಯಾಗಿದ್ದು , ಭದ್ರಕಾಳಿ ದೇವಿ ಕೆಲ ನಿಮಿಷ ಕಣ್ಣು ಬಿಟ್ಟಿದ್ದಾಳೆಂದು ಊರ ಜನರು ನಂಬಿದ್ದಾರೆ. ಇನ್ನು ದೇವಿ ಕಣ್ಣು ಬಿಟ್ಟಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇನ್ನು ದೇವರ ವಿಗ್ರಹವನ್ನು ನೋಡಲು ನೂರಾರು ಜನರು ಮುಗಿಬೀಳುತ್ತಿದ್ದಾರೆ. ದೇವಿಯನ್ನು ನೋಡಲು ಜಮಾಯಿಸಿರುವ ಅಕ್ಕಪಕ್ಕದ ಗ್ರಾಮಸ್ಥರು ಕೂಡ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ದೇವರು ಕಣ್ಣು ಬಿಟ್ಟಿದೆ ಎಂದರೆ ಪವಾಡವೇ ಬಿಡಿ.
Comments