ಕೆಲವೊಂದು ಇನ್ಟ್ರೆಸ್ಟಿಂಗ್ ವಿಷ್ಯಗಳು..! ಓದೋದನ್ನ ಮಿಸ್ ಮಾಡ್ಕೊಬೇಡಿ..!!

ನಾವು ಪ್ರಕೃತಿ ವಿಸ್ಮಯದಲ್ಲಿ ಸಾಕಷ್ಟು ವಿಸ್ಮಯಗಳನ್ನು ನೋಡಿರುತ್ತೇವೆ..ಕೆಲವೊಂದು ಭಯಾನಕವಾಗಿರುತ್ತವೆ.. ಮತ್ತೆ ಕೆಲವೊಂದು ಹಾಸ್ಯಾಸ್ಪದವಾಗಿರುತ್ತವೆ.. ಅದೇ ರೀತಿ ಪ್ರಾಣಿ ಪಕ್ಷಿಗಳು ಕೂಡ ನಾವು ಸಾಕಷ್ಟು ವಿಸ್ಮಯಗಳನ್ನು ನೋಡಬಹುದು.. ಪ್ರಾಣಿ ಮತ್ತು ಪಕ್ಷಿಗಳ ಬಗ್ಗೆ ನಾವು ಸಾಕಷ್ಟು ರೀತಿಯ ಕುತೂಹಲಕಾರಿ ವಿಷಯಗಳನ್ನ ಹೇಳೆ ಇರ್ತೀವಿ.. ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಿದಷ್ಟು ಕೂಡ ಕಡಿಮೆಯೆ.. ಯಾಕಂದ್ರೆ ಅಷ್ಟು ವಿಚಿತ್ರ ಈ ಪ್ರಾಣಿ ಪ್ರಪಂಚ.
ಕೆಲವೊಂದು ಪ್ರಾಣಿಗಳಿಗೆ ಹೃದಯನೆ ಇರುವುದಿಲ್ಲ.. ಇನ್ನೂ ಕೆಲವು ಪ್ರಾಣಿಗಳಿಗೆ ಒಂದಕ್ಕಿಂತ ಜಾಸ್ತಿ ಹೃದಯಗಳು ಇರ್ತಾವೆ...ಅಷ್ಟು ವಿಚಿತ್ರ ಈ ಪ್ರಾಣಿ ಪ್ರಪಂಚ.. ಮನುಷ್ಯರಿಗೆ ಸಾಮಾನ್ಯವಾಗಿ ಎಷ್ಟು ಹಲ್ಲುಗಳು ಇರ್ತಾವೆ ಹೇಳಿ.. 32 ಅಂತ ಎಲ್ಲರು ಹೇಳ್ತಾರೆ..ಆದರೆ ಕರಡಿಗೆ ಎಷ್ಟು ಹಲ್ಲುಗಳು ಇರ್ತಾವೆ ಹೇಳಿ... ಬರೋಬ್ಬರಿ 42 ಹಲ್ಲುಗಳು ಇವೆ... ಎಷ್ಟು ಆಶ್ಚರ್ಯ ಅಲ್ವ.. ಏಡಿಗಳು...ಆಡುಭಾಷೆಯಲ್ಲಿ ಹೇಳಬೇಕೆಂದರೆ ನಳ್ಳಿಗಳು.... ಯಾಕಪ್ಪ ಇವುಗಳ ಬಗ್ಗೆ ಮಾತನಾಡುತ್ತಿದ್ದೀರಾ ಅನ್ಕೊಂಡ್ರ.. ಸಾಮಾನ್ಯವಾಗಿ ರಕ್ತ ಯಾವ ಬಣ್ಣದಲ್ಲಿ ಇರುತ್ತೆ ಹೇಳಿ.. ಕೆಂಪು ಬಣ್ಣದಾಗಿರುತ್ತದೆ.... ಆದರೆ ಏಡಿಗಳ ರಕ್ತದಲ್ಲಿ ಬಣ್ಣವೆ ಇರುವುದಿಲ್ಲ... ಆದರೆ ಏಡಿಗಳ ರಕ್ತವನ್ನು ಗಾಳಿಯಲ್ಲಿ ಇಟ್ಟಾಗ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ.. ಏಡಿಗಳ ರಕ್ತವು ಆಮ್ಲಜನಕಕ್ಕೆ ತರೆದಿಟ್ಟಾಗ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ.
Comments