ಮಕ್ಕಳ ಟ್ಯಾಟೂ ಕ್ರೇಜ್ : ಪೋಷಕರಿಗೆ ಹೆಚ್ಚಾಗುತ್ತಿದೆ ಆತಂಕ

ಇತ್ತಿಚಿಗೆ ಟ್ಯಾಟು ಅನ್ನೋದು ಒಂದು ಟ್ರೆಂಡ್ ಕ್ರಿಯೇಟ್ ಮಾಡಿಬಿಟ್ಟಿದೆ. ಇತ್ತೀಚಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಫ್ಯಾಶನ್ ಆಗುತ್ತಿದ್ದು, ಯುವಜನತೆಯಲ್ಲಿ ಟ್ಯಾಟೂ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಆದರೆ ಈ ಕ್ರೇಜ್ ಮತ್ತು ಫ್ಯಾಶನ್ ಪೋಷಕರನ್ನು ಸಿಕ್ಕಾಪಟ್ಟೆ ಚಿಂತೆ ಮಾಡುವಂತೆ ಮಾಡಿದೆ.
ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಮಾಜ ಅವರನ್ನು ಸ್ವೀಕರಿಸುವ ರೀತಿ ಹಾಗೂ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದ್ದು, ಇದು ಪೋಷಕರ ಆತಂಕಕ್ಕೆ ಇದೀಗ ಕಾರಣವಾಗಿದೆ. ಟ್ಯಾಟೂವಿನಿಂದ ಅನೇಕ ರೀತಿಯ ಪರಿಣಾಮಗಳಿದ್ದು ಅದಕ್ಕೆ ಪೋಷಕರು ಭಯ ಪಡುವಂತಾಗಿದೆ. ಹಾಗಾಗಿ ಮಕ್ಕಳ ಇಷ್ಟಕ್ಕೆ ವಿರೋಧವನ್ನು ವ್ಯಕ್ತ ಪಡಿಸುತ್ತಾರೆ.
Comments