ಮೆಟ್ರೋ ಟಿಕೆಟ್ ಇನ್ಮುಂದೆ ಮೊಬೈಲ್’ನಲ್ಲೇ ಬುಕ್ ಮಾಡಬಹುದು..!
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಸಂತಸದ ಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ನಮ್ಮ ಮೆಟ್ರೋ ರೈಲು ಟಿಕೆಟ್ ಗಳನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ನಲ್ಲೇ ಬುಕ್ ಮಾಡಿಕೊಳ್ಳಬಹುದು.
ಕ್ಯೂ ಆರ್ ಕೋಡ್ ಆಧಾರಿತ ಟಿಕೆಟ್’ಗಳನ್ನು ಪರಿಚಯಿಸಲು ಬಿಎಂಆರ್ ಸಿಎಲ್ ಸಿದ್ಧತೆಯನ್ನು ನಡೆಸಿದ್ದು, ಪ್ರಯಾಣಿಕರು ಮೊಬೈಲ್ ಆ್ಯಪ್ ಬಳಸಿ ಹೊರಡುವ ಸ್ಥಳ, ತಲುಪುವ ಸ್ಥಳ, ಪ್ರಯಾಣಿಕರ ಸಂಖ್ಯೆಯನ್ನು ಭರ್ತಿ ಮಾಡಿ ಟಿಕೆಟ್ ಪಡೆಯಬಹುದು. ಆ್ಯಪ್ ನಲ್ಲಿ ಕ್ಯೂ.ಆರ್ ಕೋಡ್ ಕಾಣಿಸುತ್ತದೆ. ಮೆಟ್ರೋ ನಿಲ್ದಾಣಗಳ ಕ್ಯೂ.ಆರ್ ಎನೇಬಲ್ಡ್ ಸ್ವಯಂಚಾಲಿತ ಫೇರ್ ಕಲೆಕ್ಷನ್ ಗೇಟುಗಳಲ್ಲಿ ತೋರಿಸಬಹುದು. ಇದು ಜಾರಿಯಾದಲ್ಲಿ ಪ್ರಯಾಣಿಕರು ಪ್ಲಾಸ್ಟಿಕ್ ಸ್ಮಾರ್ಟ್ ಕಾರ್ಡ್ ಗಳನ್ನು ಒಯ್ಯುವ ಅಥವಾ ರೀಚಾರ್ಜ್ ಗಾಗಿ, ಟೋಕನ್ ಗಳ ಖರೀದಿಗಾಗಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲವೇ ಇರುವುದಿಲ್ಲ..
Comments