ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಈ ಕಂಪನಿಗಳಲ್ಲಿ ಉದ್ಯೋಗಾವಕಾಶ
ಕೆಲಸ ಇಲ್ಲದೆ ಪರದಾಡುತ್ತಿರುವ ನಿರುದ್ಯೋಗಿಗಳಿಗೆ ಈ ಬಾರಿಯ ಹಬ್ಬದ ಸಂಭ್ರಮಾಚರಣೆಗಾಗಿ ಅಮೆಜಾನ್ ಇಂಡಿಯಾ 50,000 ಕ್ಕೂ ಹೆಚ್ಚಿನ ತಾತ್ಕಾಲಿಕ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ.. 50 ಸಲಕರಣಾ ಕೇಂದ್ರ, 100 ವಿಂಗಡಣಾ ಕೇಂದ್ರಗಳು, 150 ವಿತರಣಾ ಕೇಂದ್ರಗಳು ಈಗಾಗಲೇ ಭಾರತದಾದ್ಯಂತ ಕಾರ್ಯವನ್ನು ನಿರ್ವಹಿಸುತ್ತಿವೆ.
ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತು ಗ್ರಾಹಕರ ಬೇಡಿಕೆ ಈಡೇರಿಸುವ ಸಲುವಾಗಿ ಅಮೆಜಾನ್ ಇಂಡಿಯಾ, ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಈ ಹೊಸ ಉದ್ಯೋಗಿಗಳು ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಇಮೇಲ್, ಚಾಟ್, ಸಾಮಾಜಿಕ ಜಾಲತಾಣ ಮತ್ತು ದೂರವಾಣಿ ಕರೆ ಮೂಲಕ ಗ್ರಾಹಕರಿಗೆ ನೆರವು ನೀಡಲಿದ್ದಾರೆ ಎಂದು ಕಂಪನಿ ತಿಳಿಸಿದೆ. ಅಕ್ಟೋಬರ್ 10 ರಿಂದ 15 ರವರೆಗೆ ಹಬ್ಬದ ವಿಶೇಷ ಕೊಡುಗೆಗಳಿದ್ದು, ಗ್ರಾಹಕರಿಗೆ ಅತ್ಯುತ್ತಮ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿವೆ.
Comments