ಅಪಘಾತದಲ್ಲಿ ಸಾವನ್ನಪ್ಪಿದ ದಸರಾ ಆನೆ 'ರಂಗ'
ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಬೇಕಿದ್ದ ಆನೆ ರಂಗನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೊಂಟ ಮುರಿದು ಆನೆ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆಗಳ ಶಿಬಿರದಲ್ಲಿ ನಡೆದಿದೆ.
45 ವರ್ಷದ ಪ್ರಾಯದ ಆನೆ ರಂಗನನ್ನು ಎಂದಿನಂತೆ ರಾತ್ರಿ ತಿರುಗಾಡಲು ಬಿಡಲಾಗಿತ್ತು. ರಾತ್ರಿ 2 ಗಂಟೆ ಸುಮಾರಿಗೆ ಬಂದಿರುವ ಖಾಸಗಿ ಬಸ್ ವೊಂದು ಆನೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ತಳದಲ್ಲಿ ಕುಸಿದುಬಿದ್ದು ಆನೆ ಸಾವನ್ನಪ್ಪಿದೆ. ಘಟನೆ ಸಂಬಂಧ ಕಲ್ಪಕ ಖಾಸಗಿ ಬಸ್ ಚಾಲಕನ ವಿರುದ್ಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನನ್ನು ಬಂಧನಕ್ಕೊಳಪಡಿಸಿದ್ದಾರೆ. 3 ವರ್ಷಗಳ ಹಿಂದೆ ಬೆಂಗಳೂರಿನಿಂದ ರಂಗನನ್ನು ಮತ್ತಿಗೋಡು ಆನೆ ಶಿಬಿರಕ್ಕೆ ಕರೆದೊಯ್ಯಲಾಗಿತ್ತು. ದಸರಾ ಹಬ್ಬ ಹಿನ್ನಲೆಯಲ್ಲಿ ರಂಗನನ್ನು ಮೈಸೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿತ್ತು. ಈ ನಡುವಲ್ಲೇ ದುರಂತ ಸಂಭವಿಸಿದೆ.
Comments