ಇಂದಿರಾ ಕ್ಯಾಂಟೀನ್’ನಲ್ಲಿ ಇನ್ಮುಂದೆ ಸಿಗಲಿದೆ ಉಪಹಾರದ ಜೊತೆಗೆ ಬಿಸಿಬಿಸಿ ಚಾಯ್

ಇಂದಿರಾ ಕ್ಯಾಂಟಿನ್ ಬಂದ ಮೇಲೆ ಸಾಕಷ್ಟು ಜನರಿಗೆ ಅನುಕೂಲವಾಗಿದೆ… ಕಡಿಮೆ ಬೆಲೆಗೆ ಸಿಗುವ ಊಟದಿಂದ ಬಡವರಿಗೆ ಅನುಕಾಲವಾಗಿದೆ. ಇನ್ನುಮುಂದೆ ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಪಹಾರದ ಜೊತೆಗೆ ಬಿಸಿ ಬಿಸಿ ಚಹಾವನ್ನು ಕೂಡ ಸವಿಯಬಹುದು.
198 ಕ್ಯಾಂಟೀನ್‌ಗಳಲ್ಲಿ ಹೊಸ ಆಹಾರ ಪರಿಚಯಿಸುವ ಸಿದ್ಧತೆಯಲ್ಲಿರುವ ಬಿಬಿಎಂಪಿ ಕ್ಯಾಂಟಿನ್ ಗಳಿಂದ ಭೇಟಿ ನೀಡುವ 1,500 ಗ್ರಾಹಕರಿಂದ ಸಲಹೆಗಳನ್ನು ಪಡೆದುಕೊಂಡಿದೆ. ಬಹುತೇಕ ಜನತೆ ಚಹಾ ಮತ್ತು ಬಿಸಿ ಪಾನೀಯಗಳನ್ನು ಸಬ್ಸಿಡಿ ದರದಲ್ಲಿ ನೀಡುವಂತೆ ಜನರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಎಂದು ಹೇಳಲಾಗುತ್ತಿದೆ. ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು,ಸಾರ್ವಜನಿಕರ ಸಲಹೆಯಂತೆ ಇಂದಿರಾ ಕ್ಯಾಂಟೀನ್ ಮೆನು ಬದಲಿಸಲು ಚಿಂತನೆಯನ್ನು ನಡೆಸಲಾಗಿದೆಯಂತೆ.
Comments