ಒಂದೇ ಕಾಲು ಹಾಗೂ ಬಾಲ ಇರುವ ವಿಚಿತ್ರ ಮಗು ಜನನ..!

ಪ್ರಕೃತಿ ಎಷ್ಟು ವಿಚಿತ್ರ ಅನ್ನೋದಕ್ಕೆ ಇದೆ ಸಾಕ್ಷಿ ಅನ್ನಿಸುತ್ತದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಒಂದೇ ಕಾಲು ಹಾಗೂ ಬಾಲ ಇರುವ ಮಗು ಜನಿಸಿದ್ದು, ಇಡೀ ವೈದ್ಯಕೀಯ ಲೋಕವೇ ಅಚ್ಚರಿ ಪಡುವಂತಾಗಿದೆ. ಆದರೆ ಮಗು ಹುಟ್ಟಿದ ಕೂಡಲೇ ಸಾವನ್ನಪ್ಪಿದೆ. ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ಜನನಾಂಗ ಕೂಡ ಇರಲಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಶನಿವಾರಸಂತೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಈ ಮಗು ಜನಿಸಿದಷ್ಟೆ ಅಲ್ಲದೆ ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿತ್ತು. ಚಂಗಡಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಭುವನಳ್ಳಿ ಗ್ರಾಮದ ಚಿನ್ನಮ್ಮ ಮತ್ತು ಮೂರ್ತಿ ದಂಪತಿಗೆ ಈ ಮಗು ಜನಿಸಿದೆ. ಆಸ್ಪತ್ರೆಯ ನರ್ಸ್ ಗೀತಾ ಅವರು ಗರ್ಭಿಣಿ ಚಿನ್ನಮ್ಮ ಅವರಿಗೆ ಹೆರಿಗೆಯನ್ನು ಮಾಡಿಸಿದ್ದರು. ಆದರೆ ಒಂದು ಕಾಲು ಮತ್ತು ಬಾಲ ಇರುವ ಮಗು ಜನಿಸಿತ್ತು. ಚಿನ್ನಮ್ಮ ಅವರು ಕಳೆದ ಐದು ತಿಂಗಳಿಂದ ಸ್ಕ್ಯಾನಿಂಗ್ ಮಾಡಿಸಿರಲಿಲ್ಲ. ಇದರಿಂದ ಸಮಸ್ಯೆ ತಿಳಿಯಲು ಸಾಧ್ಯವಾಗಿಲ್ಲ ಎಂದು ಹೆರಿಗೆ ಮಾಡಿಸಿರುವ ಗೀತಾ ಅವರು ಹೇಳಿದ್ದಾರೆ. .
Comments