ನಿರುದ್ಯೋಗಿಗಳಿಗೆ ಗುಡ್'ನ್ಯೂಸ್: ನಿರುದ್ಯೋಗಿಗಳಿಗೆ ಇಂದಿನಿಂದ ಒಂದು ಸಾವಿರ ರೂಪಾಯಿ ಭತ್ಯೆ

ಸಾಮಾನ್ಯವಾಗಿ ಭತ್ಯೆಯನ್ನು ಯಾರಿಗೆಲ್ಲಾ ಕೊಡುತ್ತಾರೆ ಹೇಳಿ, ವಿಕಲಚೇತನರಿಗೆ, ವೃದ್ಧರಿಗೆ, ವಿದುವೆಯರಿಗೆ ಕೊಡುವುದನ್ನು ನೋಡಿರುತ್ತೇವೆ. ಆದರೆ ಅರ್ಹ ನಿರುದ್ಯೋಗಿಗಳಿಗೆ ಮಾಸಿಕ 1,000 ರು. ನಿರುದ್ಯೋಗ ಭತ್ಯೆ ನೀಡುವ ಯೋಜನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು ಚಾಲನೆ ನೀಡಲಿದ್ದಾರೆ.
'ಮುಖ್ಯಮಂತ್ರಿ ಯುವ ನೇಸ್ತಂ' ಯೋಜನೆ ಅಡಿಯಲ್ಲಿ ವೆಬ್‌ವಾಹಿನಿಯಲ್ಲಿ ಈಗಾಗಲೇ ಸರಿ ಸುಮಾರು 2 ಲಕ್ಷ ನಿರುದ್ಯೋಗಿಗಳು ನೋಂದಾಯಿತರಾಗಿದ್ದಾರೆ. ಸೂಕ್ತ ಉದ್ಯೋಗ ದೊರೆಯುವವರೆಗೆ ವಿದ್ಯಾವಂತ ನಿರುದ್ಯೋಗಿಗಳಿಗೆ ಈ ಭತ್ಯೆವು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. 2014ರ ಚುನಾವಣೆಯ ವೇಳೆ ಟಿಡಿಪಿ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಿತ್ತು. ಹಂತಹಂತವಾಗಿ 12 ಲಕ್ಷ ಫಲಾನುಭವಿಗಳು ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
Comments