ಸಾಲಮನ್ನಾಕ್ಕೆ ಅರ್ಜಿ ಹಾಕಿಲ್ಲವೇ? ಅರ್ಜಿ ಸಲ್ಲಿಕೆಯ ಗಡುವು ವಿಸ್ತರಣೆ ಮಾಡಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರದಿಂದ ಸಾಲ ಮನ್ನಾ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಮನ್ನಾ ಯೋಜನೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಇನ್ನೂ 10 ದಿನಗಳಿಗೆ ವಿಸ್ತರಿಸಿ ಸೋಮವಾರ ಸಹಕಾರ ಇಲಾಖೆ ನಿಬಂಧಕರು ಆದೇಶವನ್ನು ಹೊರಡಿಸಿದ್ದಾರೆ. ಈ ಅವದಿ ವಿಸ್ತರಣೆಯು ರೈತರಿಗೂ ನೆಮ್ಮದಿಯನ್ನು ತಂದಿದೆ.
ಪೂರ್ವ ನಿಗದಿತ ಸೆಪ್ಟೆಂಬರ್‌ವರೆಗೆ ಗಡುವು ಮುಗಿಯುವ ಸಾಲಗಳಿಗೆ ರೈತರಿಂದ ಅರ್ಜಿ ಮತ್ತು ಸ್ವಯಂ ದೃಢೀಕರಣ ಪಡೆಯಲು ಅಕ್ಟೋಬರ್ 15 ವರೆಗೆ ಕಾಲಾವಕಾಶ ನೀಡಲಾಗಿತ್ತು. ಈಗ ಈ ಗಡುವು ಮುಗಿದ ನಂತರವೂ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗಿದೆ. ಸಾಲ ಮನ್ನಾಕ್ಕೆ ರೈತರಿಂದ ಅರ್ಜಿ ಪಡೆಯಲು ಅಕ್ಟೋಬರ್ 25ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Comments