ಖಾಸಗಿ ಬಸ್ ಪ್ರಯಾಣ ದರದಲ್ಲಿ ಹೆಚ್ಚಳ..!?
ದಸರಾ ಹಬ್ಬಕ್ಕೆ ಶಾಲೆಗಳಿಗೆ ರಜೆ ಇರುವುದರಿಂದ ಸಾಲು ಕೆಲಸಗಳಿಗೂ ಸಾಲು ಸಾಲು ರಜೆ ಇರುವುದರಿಂದ ಎಲ್ಲರೂ ಕೂಡ ತಮ್ಮ ತಮ್ಮ ಊರುಗಳಿಗೆ ಹೋಗುವ ಪ್ಲಾನ್ ಮಾಡಿರುತ್ತಾರೆ. ಒಂದು ವೇಳೆ ಖಾಸಗಿ ಬಸ್ ಹತ್ತುವ ಪ್ಲಾನ್ ಇದ್ದರೆ ಸ್ವಲ್ಪ ಯೋಚನೆ ಮಾಡಿ. ಅಪ್ಪಿ ತಪ್ಪಿ ಏನಾದ್ರು ಖಾಸಗಿ ಬಸ್ ನಲ್ಲಿ ಹಬ್ಬದ ಹಿಂದಿನ ದಿವಸ ನೀವು ಪ್ರಯಾಣ ಮಾಡಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ಸುಳ್ಳಲ್ಲ.
ವಿಜಯ ದಶಮಿ ಹಾಗೂ ಆಯುಧ ಪೂಜೆ ಹಬ್ಬಗಳಿಗೆ ತಮ್ಮ ಊರು ಬಿಟ್ಟು ದೂರದ ಊರಿನಲ್ಲಿ ಬಂದು ಇರುವವರೂ ಹಬ್ಬಕ್ಕೆ ಊರಿಗೆ ಹೋಗೇ ಹೋಗ್ತಾರೆ. ಈ ನಡುವೆ ಹೀಗೆ ದೂರದ ಊರಿಗೆ ಹೋಗುವರರ ಪ್ರಯಣವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಖಾಸಗಿ ಬಸ್ ಮಾಲೀಕರು ಪ್ರಯಾಣದ ದರವನ್ನು ಹೆಚ್ಚು ಮಾಡಿದ್ದಾರೆ ಎನ್ನಲಾಗಿದೆ. ಸಾಮಾನ್ಯ ದಿನಗಳ ಬೆಲೆಗಿಂತ 10 ರಿಂದ 50 ಪಟ್ಟು ಹೆಚ್ಚಿನ ಹಣವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ.ಹಾಗಾಗಿ ಊರಿಗೆ ಹೋಗುವ ಮುನ್ನ ಎಚ್ಚರದಿಂದಿರಿ.
Comments