ನನ್ನ ಕಿಡ್ನಿ ಮಾರಾಟಕ್ಕಿದೆ..! ಟೀ ಅಂಗಡಿ ಮುಂದೆ ಮನಕಲಕುವ ಫಲಕ

ಸಾಲ ತೀರಿಸಲು ಆಗದೆ ಕೆಲವೊಮ್ಮೆ ಸಾವಿಗೆ ಶರಣಾಗುವುದು ಉಂಟು… ಆದರೆ ಯುವಕನೊಬ್ಬ ತನ್ನ ಸಾಲ ತೀರಿಸಲು ತನ್ನ ಟೀ ಅಂಗಡಿ ಮುಂದೆ ಕಿಡ್ನಿ ಮಾರಾಟಕ್ಕಿದೆ ಎಂಬ ಫಲಕ ಹಾಕಿರುವ ಮನ ಕಲಕುವ ಘಟನೆ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ನಲ್ಲಿ ನಡೆದಿದೆ.
ವಿನೋದ್ ಕುಮಾರ್ ಎಂಬ ಯುವಕ ಮನೆ ಕಟ್ಟಲು ಮತ್ತು ಇತರ ಕಾರಣಗಳಿಗೆ ಸಾಲಾ ಮಾಡಿಕೊಂಡಿದ್ದ. ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಲಾಗದೇ ಜಮೀನು ಅಡವಿಡಲು ಕೂಡ ಮುಂದಾಗಿದ್ದ. ಜಮೀನನ ಸ್ಕೆಚ್ ಕೊಡಲು ಅಧಿಕಾರಿಗಳು ಲಂಚ ಕೇಳುತ್ತಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹಾಗಾಗಿ ನನ್ನ ಕಿಡ್ನಿ ಮಾರಿ ಸಾಲ ತೀರಿಸುವ ನಿರ್ಧಾರ ಮಾಡಿದ್ದೇನೆ ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.
Comments