ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್..!

ಹೆಣ್ಣು ಮಕ್ಕಳಿಗೆ ಒಡವೆ ಅಂದ್ರೆ ಸಾಕು ಪಂಚಪ್ರಾಣ… ಆದರೆ ಚಿನ್ನದ ಬೆಲೆ ದಿನದಿಂದ ಬಗ್ಗೆ ಹೆಚ್ಚಾಗುತ್ತಲೆ ಇದೆ.. ಆದ ಕಾರಣ ಹೆಣ್ಣು ಮಕ್ಕಳು ಒಡವೆಗಳ ಬಗ್ಗೆ ಗಮನ ಕೊಡೋದನೇ ಬಿಟ್ಟುಬಿಟ್ಟಿದ್ದಾರೆ. ಆದರೆ ಇದೀಗ ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡು ಬರುತ್ತದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 250ರು. ಇಳಿಕೆಯಾಗಿದ್ದು ಇದರಿಂದ 10 ಗ್ರಾಂ ಚಿನ್ನದ ಬೆಲೆಯು 31,300 ರು.ಗಳಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆಯು ಕುಸಿದ ಪರಿಣಾಮವಾಗಿ ಚಿನ್ನದ ಬೇಡಿಕೆ ಕಡಿಮೆಯಾಗಿದೆ..ಹೆಣ್ಣು ಮಕ್ಕಳಿಗೆ ಒಂದೊಳ್ಳೆ ಅವಕಾಶವಿದೆ.
Comments