ಕೆರೆಯಲ್ಲಿ ವಿಮಾನ ಇಳಿಸಿದ ಪೈಲೆಟ್..!
ಕೆಲವೊಮ್ಮೆ ಜನ ಯೋಚನೆ ಮಾಡ್ತಾರೆ ಒಂದು ಸಲ ಆದ್ರೂ ಪ್ಲೈಟ್ ನಲ್ಲಿ ಹೋಗಬೇಕು ಅಂತಾ.. ಆಕಸ್ಮಾತ್ ಫಸ್ಟ್ ಟೈಮ್ ಈ ರೀತಿ ಅನಾಹುತ ಆದರೆ ಜನ್ಮದಲ್ಲೆ ಪ್ಲೈಟ್ ಸಹವಾಸಕ್ಕೆ ಹೋಗಲ್ಲ ಅಂತೀರಾ.. ಮುಂದೆ ಓದಿ
ವಿಮಾನ ನಿಲ್ದಾಣದ ಆಪರೇಟರ್ 'ನೋಡಿ ರನ್ ವೇ ಇಲ್ಲಿದೆ, ನೀನು ಸ್ವಲ್ಪ ಲೆಫ್ಟ್ಗೆ ಹೋಗಿ ರೈಟ್ ತಗೊಂಡು ಕೆಳಗೆ ಇಳಿಸು ಅಂದ್ರೆ ಆ ಪೈಲೆಟ್ ಹೇಗೆ ಕೇಳಿಸಿಕೊಂಡ್ನೋ ಏನ್ ಕಥೆನೋ .. ಎಸ್ ಸರ್… ನೇರವಾಗಿ ವಿಮಾನವನ್ನು ಕೆರೆಗೆ ಇಳಿಸಿ ಬಿಟ್ಟಿದ್ದಾನೆ… ಪ್ರಯಾಣಿಕರಿದ್ದ ವಿಮಾನವೊಂದು ಲ್ಯಾಂಡಿಂಗ್ ಆಗುವ ಸಮಯದಲ್ಲಿ ಪೈಲೆಟ್ ನಿಯಂತ್ರಣವನ್ನು ತಪ್ಪಿ ಕೆರೆಗೆ ಇಳಿದ ಘಟನೆ ನ್ಯೂಜಿಲೆಂಡ್ ನ ವೆಲ್ಲಿಂಗ್ಟನ್ ಬಳಿ ನಡೆದಿದೆ.ವಿಮಾನದಲ್ಲಿದ್ದ 36 ಪ್ರಯಾಣಿಕರು ಹಾಗೂ 11 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ, ಈ ಅನಾಹುತಕ್ಕೆ ಕಾರಣ ಏನು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Comments