ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದಿಯಾ..? ಹಾಗಾದ್ರೆ ರಾಜ್ಯ ಸರ್ಕಾರದಿಂದ ಮನೆ ಕಟ್ಟುವವರಿಗೆ ಸಿಕ್ತಿದೆ ಗುಡ್ ನ್ಯೂಸ್

28 Sep 2018 10:06 AM | General
7004 Report

ರಾಜ್ಯ ಸರ್ಕಾರವು ಒಂದಲ್ಲ ಒಂದು ಯೋಜನೆಯನ್ನು ಜನಸಾಮಾನ್ಯರಿಗೆ ನೀಡುತ್ತಲೆ ಇದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಹೊಂದಿರುವವರಿಗಂತೂ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಉದ್ಯೋಗ ಖಾತ್ರಿ ಯೋಜನೆಯಡಿ ಬಿಪಿಎಲ್ ಪಲಾನುಭವಿಗಳಿಗೆ ಮನೆ ‌ನಿರ್ಮಾಣಕ್ಕಾಗಿ ಹಣ ನೀಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡುವ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಮನೆ ನಿರ್ಮಿಸುವ ಬಿಪಿಎಲ್ ಫಲಾನುಭವಿಗಳ ಪ್ರತಿ ಕುಂಟುಬಕ್ಕೆ 22 ಸಾವಿರ ರೂ. ಹಣ‌ ‌ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಮಯದಲ್ಲಿ ಮಾತನಾಡುತ್ತ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 22 ವೃಕ್ಷಾಧಾರಿತ ತೋಟಗಾರಿಕೆ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂ. ರಿಂದ 90 ಸಾವಿರ ರೂ. ತನಕ ಕೊಡಬಹುದಾಗಿದೆ. ಅದರಂತೆ ಮಾವಿನ ಬೆಳೆಗೆ 30 ಸಾವಿರ ರೂ., ಬಾಳೆಗೆ 80ಸಾವಿರ, ರೇಷ್ಮೆಗೆ ಮೂರು ವರ್ಷಗಳ ಅವಧಿಗೆ ಒಟ್ಟು2,92,000 ರೂ.ಕೊಡ ಬಹುದಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Edited By

Manjula M

Reported By

Manjula M

Comments