ದುನಿಯಾ ವಿಜಯ್ ಬಿಡುಗಡೆಗೆ ಮೊದಲ ಪತ್ನಿ ಮಾಡ್ತಿರೋ ಮಾಸ್ಟರ್ ಪ್ಲಾನ್ ಏನ್ ಗೊತ್ತಾ..!?

ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ದುನಿಯಾ ವಿಜಿ ಹಲ್ಲೆ ಪ್ರಕರಣ ಸಂಬಂಧವಾಗಿ ದುನಿಯಾ ವಿಜಯ್ ಕಾರಾಗೃಹ ಬಂಧನದಲ್ಲಿದ್ದಾರೆ. ಇದೀಗ ಪಾನಿಪುರಿ ಕಿಟ್ಟಿ ಭೇಟಿ ಮಾಡಲು ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲು ದುನಿಯಾ ವಿಜಯ್ ಅವರ ಮೊದಲ ಪತ್ನಿ ನಾಗರತ್ನ ಹಾಗೂ ಅವರ ಸಹೋದರ ಸಂಪತ್ತು, ಪಾನಿಪುರಿ ಕಿಟ್ಟಿಯನ್ನು ಭೇಟಿ ಮಾಡಿ ಮಾತನಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ತೆರೆಮರೆಯಲ್ಲಿ ದುನಿಯಾ ವಿಜಯ್ ವಿರುದ್ದ ದಾಖಲಾಗಿರುವ ಪ್ರಕರಣವನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ನಾಗರತ್ನ ಅವರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Comments