ದೇಶದಲ್ಲೇ ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಶ್ವಾನಗಳಿಗೂ ಕ್ಯಾಬ್..!!

27 Sep 2018 3:10 PM | General
385 Report

ಸಿಲಿಕಾನ್ ಸಿಟಿಯಲ್ಲಿ ಕೆಲವೊಮ್ಮೆ ಮನುಷ್ಯರಿಗೆ ಎಮರ್ಜೆನ್ಸಿ ಅಂದರೆ ಓಡಾಡೋದಕ್ಕೆ ಏನು ಸಿಗಲ್ಲ… ಅಂತಹುದರಲ್ಲಿ ನಾಯಿಗಳಿಗೆ ಕ್ಯಾಬ್ ಬರುತ್ತಿವೆ ಅಂದರೆ ನಂಬೋದಕ್ಕೆ ಸ್ವಲ್ಪ ಕಷ್ಟ ಆದರೂ ಪರವಾಗಿಲ್ಲ..ಇದು ನಿಜನೇ.. ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಜನರ ಓಡಾಟಕ್ಕೆ ಓಲಾ, ಉಬರ್, ಕ್ಯಾಬ್ ಇವೆ. ಆದರೆ ನಾಯಿಗಳಿಗೂ ಕೂಡ ಕ್ಯಾಬ್ ಓಪನ್ ಆಗತ್ತಿದೆ.

ಶ್ವಾನಗಳಿಗೂ ಕೂಡ ಕ್ಯಾಬ್ ಸೌಲಭ್ಯ ಸಿಕ್ಕಿದೆ. ಡೊಗ್ಗೂರು ಅಮೃತ್ ಸಂಸ್ಥೆ ಅವರು ಶ್ವಾನ ಮತ್ತು ಇತರೆ ಸಾಕು ಪ್ರಾಣಿಗಳಿಗಾಗಿ ಈ ವ್ಯವಸ್ಥೆಯನ್ನು ಮಾಡಿದೆ ಎಂದು ತಿಳಿಸಿದ್ದಾರೆ. ಓಡಾಡುವುದಕ್ಕೆ ಮಾತ್ರವಲ್ಲದೇ ಶ್ವಾನಗಳಲ್ಲಿ ಆರೋಗ್ಯ ಸಮಸ್ಯೆ ಉಂಟಾದಾಗ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಆಪ್ ಆಧಾರಿತ ಶ್ವಾನಗಳ ಕ್ಯಾಬ್ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. Pawcab ಹೆಸರಿನಲ್ಲಿ ಶ್ವಾನ ಕ್ಯಾಬ್ ಆರಂಭವಾಗಿದ್ದು, ನೀವು ಇದನ್ನ ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಶ್ವಾನಕ್ಕೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ಹತ್ತಿರದಲ್ಲಿರೋ ಡಾಗ್ ಕೇರ್ ಸೆಂಟರ್ ಯಾವುದು ಎಂಬ ಮಾಹಿತಿ ನೀಡುವುದರ ಜೊತೆಯಲ್ಲಿಯೇ ಹತ್ತಿರದ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಬೀದಿ ನಾಯಿಗಳಿಗೆ ಅಪಾಯವಾದ ಸಮಯದಲ್ಲಿ ಉಚಿತ ಚಿಕಿತ್ಸೆ ಮಾಡುವುದರ ಜೊತೆಗೆ ಅವುಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಸಿಬ್ಬಂದಿಯೇ ಸಂಸ್ಕಾರ ಸ್ಥಳಕ್ಕೆ ಸಾಗಿಸಲು ಸಹಾಯ ಮಾಡುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥ ಅಮೃತ್ ಅವರು ತಿಳಿಸಿದರು.

Edited By

Manjula M

Reported By

Manjula M

Comments