ವೇಸ್ಟ್ ಬಾಟಲ್’ನಲ್ಲೂ ಕೂಡ ಮನೆ ನಿರ್ಮಿಸಬಹುದು ಹೇಗೆ ಅಂತೀರಾ…

ತನ್ನ ಆಕೃತಿ ಮತ್ತು ನಿರ್ಮಾಣದ ಶೈಲಿಯಿಂದಾಗಿ ಪ್ರಖ್ಯಾತಿ ಗಮನ ಸೆಳೆದಿರುತ್ತದೆ. ಅಂತಹದ್ರಲ್ಲಿ ವಿಶಿಷ್ಟ ಶೈಲಿಯಲ್ಲಿರುವ ಈ ಮನೆಗಳು ಕೂಡ ಒಂದು.. ನೀವು ನೋಡ್ತಿರೋ ಈ ಮನೆಗಳನ್ನು ಕಲ್ಲಿನಿಂದಲೋ ಅಥವಾ ಇಟ್ಟಿಗೆನಿಂದಲೋ ಕಟ್ಟಿರೋದೆಲ್ಲಾ ಬದಲಿಗೆ ನಾವು ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಬಾಟಲ್‍ನಿಂದ ಕಟ್ಟಿದ್ದಾರೆ.
ನಾವು ಬಾಟಲ್ ನೀರು ಅಥವಾ ಪಾನೀಯವನ್ನು ಕುಡಿದು ಅದನ್ನು ಬಿಸಾಡುತ್ತೇವೆ. ಪ್ಲಾಸ್ಟಿಕ್ ಬಾಟಲ್‍ಗಳು ನಮ್ಮ ಪರಿಸರಕ್ಕೆ ಮತ್ತು ವನ್ಯಜೀವಿಗಳಿಗೆ ಎಷ್ಟು ಹೇಗೆ ಹಾನಿಕರಕ ಎಂಬುದೂ ನಮಗೆ ತಿಳಿದಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯಲು ನೂರಾರು ವರ್ಷಗಳು ಕಳೆಯುತ್ತದೆ. ಪ್ಲಾಸ್ಟಿಕ್‍ನಿಂದಾದ ಅವಾಂತರವನ್ನು ಅರಿತ ಜನರು ಪ್ಲಾಸ್ಟಿಕ್‍ಗೆ ಪರ್ಯಾಯ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದ್ದ ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿತ್ತು. ಆದರೆ ಒಂದು ಸಮಸ್ಯೆಯನ್ನು ಮತ್ತೊಂದು ಸಮಸ್ಯೆಗೆ ಪರಿಹಾರವಾಗಿ ಬಳಸಿಕೊಂಡಿದ್ದಾರೆ ನೈಜೀರಿಯಾ ಜನತೆ. ಮಣ್ಣಿಗೆ ಮಾರಕವಾಗಿರುವ, ಜನರು ತಿರಸ್ಕರಿದ ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಸಿಕೊಂಡು ತಮಗೆ ವಾಸಿಸಲು ಮನೆಗಳ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ನಮ್ಮ ಸುತ್ತ ಮುತ್ತ ವಿವಿಧ ವಿನ್ಯಾಸದ ಮನೆಗಳನ್ನು ನೋಡಿರುತ್ತೇವೆ. ಆದರೆ ಇವರು ಕಟ್ಟಿರುವ ಈ ಬಾಟಲಿ ಮನೆಗಳು ಎಲ್ಲಾರ ಗಮನ ಸೆಳೆಯುತ್ತದೆ. ಇದು ನೈಜೀರಿಯಾ ದೇಶದ ಗಾಂಜಾ ಎಂಬ ಪ್ರದೇಶದಲ್ಲಿ ಗಾಜಿನ ಬಾಟಲಿಗಳಿಂದ ಹಲವು ಮನೆಗಳನ್ನು ನಿರ್ಮಿಸಲಾಗಿದೆ. ಇದು ಇಲ್ಲಿನ ವಿಶೇಷ.ಗ್ರೀಕ್ ಪರಿಸರ ತಜ್ಞ ಮತ್ತು ಪರಿಸರವಾದಿಯೊಬ್ಬರು ಸುಮಾರು 25 ಮನೆಗಳಿಗೆ ನೆರವಾಗುವಷ್ಟು ಭೂಮಿಯನ್ನು ದಾನ ಮಾಡಿದ್ದಾರೆ. ಈ ಮನೆಗಳು ಬಾಡಿಗೆಗೆ ದೊರೆಯುತ್ತದೆ. ನಾವು ಸೇವಿಸಿ ಬಿಸಾಡಿದ ನೀರಿನ ಹಾಗೂ ತಂಪು ಪಾನೀಯದ ಬಾಟಲಿಗಳಿಗೆ ಮಣ್ಣು ಅಥವಾ ಮರಳು ತುಂಬಿಸಿ ಇಟ್ಟಿಗೆಯ ರೀತಿ ಬಳಸಿ ಕಟ್ಟಿದ್ದಾರೆ. ನೈಜೀರಿಯಾದಲ್ಲಿ ವಾಸಕ್ಕೆ ಮನೆಗಳಿಲ್ಲದವರು ಲಕ್ಷಾಂತರ ಜನರಿದ್ದಾರೆ. ಸೂರಿಲ್ಲದವರು ಮನೆಯನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ಕಟ್ಟಿ ವಾಸಿಸುತ್ತಿದ್ದಾರೆ.
ನೈಜೀರಿಯಾದಲ್ಲಿ ಪ್ಲಾಸ್ಟಿಕ್ ಬಾಟಲಿಯ ಸಮಸ್ಯೆ ತುಸು ಹೆಚ್ಚು ಅಂತಾನೇ ಹೇಳಬಹುದು. ದಿನಕ್ಕೆ 35 ಲಕ್ಷಕ್ಕೂ ಹೆಚ್ಚು ಪ್ಲಾಸ್ಟಿಕ್ ಬಾಟಲಿಗಳು ಕಸದ ರಾಶಿಗೆ ಬೀಳುತ್ತಿದೆ. ಸಮಸ್ಯೆಯಾಗಿದ್ದ ಪ್ಲಾಸ್ಟಿಕ್ ಪರಿಹರಿಸಿಕೊಳ್ಳುವುದರ ಜೊತೆಗೆ ಮನೆ ಇಲ್ಲದವರು ಇದನ್ನು ಬಳಸಿಕೊಂಡು ತಮ್ಮ ವಾಸಕ್ಕೆ ದಾರಿ ಮಾಡಿಕೊಳ್ಳುತ್ತಿದ್ದಾರೆ.ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಾರೆ. ಬಾಟಲಿಗಳಿಗೆ ಮರಳಿನಿಂದ ತುಂಬಿಸಿ ನಂತರ ಬಾಟಲಿಗಳನ್ನು ಸಾಲಾಗಿ ಜೋಡಿಸಲಾಗುತ್ತದೆ. ಮರಳು ಮತ್ತು ಸಿಮೆಂಟ್‍ನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆ ಹಾಕಲಾಗುತ್ತದೆ. ಮರಳು ಮತ್ತು ಸೀಮೆಂಟ್‍ನ್ನು ಹಾಕುವುದರಿಂದ ಬಾಟಲಿಗಳನ್ನು ಹಿಡಿದಿಡುತ್ತದೆ.ಮನೆಯ ಪ್ರತಿಯೊಂದು ರೂಮುಗಳು, ಅಡುಗೆ ಮನೆ, ಹೋರಾಂಗಣ, ಒಳಾಂಗಣ, ಶೌಚಾಲಯವೂ ಬಾಟಲಿಯಿಂದ ನಿರ್ಮಾಣವಾಗಿದೆ. ಇವರು ಕಟ್ಟಿದ ಮನೆಯ ಗೋಡೆಗಳು ಕಲಾಕೃತಿಯಂತೆ ಕಾಣುತ್ತದೆ. ಸುಂದರವಾಗಿ ಕಾಣುವುದರ ಜೊತೆಗೆ ಹೆಚ್ಚು ಬಾಳಿಕೆಯೂ ಬರುತ್ತದೆ. ಹೀಗೆ ನಿರ್ಮಿಸಿದ ಮನೆಗಳು ಬಿಸಿಲಿನ ತಾಪವನ್ನು ತಡೆಯುವ ಸಾಮಥ್ರ್ಯವನ್ನು ಹೊಂದಿರುವುದರಿಂದ ಮನೆಯು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಬಾಟಲ್‍ಗಳು ಮಣ್ಣಿನಲ್ಲಿ ಹಾಗೂ ನೀರಿನಲ್ಲಿ ಕರಗದೆ ಇರುವುದರಿಂದ ಮಳೆ ಬಂದರೂ ಮನೆಗಳಿಗೆ ಯಾವುದೇ ರೀತಿಯ ಹಾನಿಯಾಗುದಿಲ್ಲ. ಇಷ್ಟೇ ಅಲ್ಲದೇ ನೈಜೀರಿಯಾದಲ್ಲಿ ಕಟ್ತಾ ಇರೋ ಮನೆಗಳಲ್ಲಿ ಸೋಲಾರ್ ಪ್ಯಾನಲ್ ಮತ್ತು ಬಯೋಗ್ಯಾಸ್ ಯೂನಿಟ್ ಕೂಡ ಅಳವಡಿಸಿಕೊಂಡಿದ್ದಾರೆ. ಇದರಿಂದ ವಿದ್ಯುತ್ ಕೂಡ ಉತ್ಪತ್ತಿಯಾಗುತ್ತಿದೆ. ಒಂದು ಸಂಪೂರ್ಣ ಮನೆ ನಿರ್ಮಾಣವಾಗಬೇಕಾದರೆ ಅಂದಾಜು 7000 ರಿಂದ 7500 ಸಾವಿರ ಬಾಟಲಿಗಳು ಬೇಕಾಗುತ್ತದೆ. ಇದು ಇಟ್ಟಿಗೆಯಿಂದ ಕಟ್ಟಿದ ಮನೆಗಳಿಗಿಂದ 10 ಪಟ್ಟು ಗಟ್ಟಿಯಾಗಿರುತ್ತದೆ. ಕಟ್ಟಿದ ಮನೆ ಬುಲೆಟ್ ಪ್ರೂಫ್, ಫೈರ್ ಪ್ರೂಫ್ ಅಷ್ಟೇ ಅಲ್ಲ ಭೂಕಂಪ ಕೂಡ ತಡ್ಕೋಳತ್ತೆ. ವರ್ಷ ಪೂರ್ತಿ ಹಿತವಾದ ವಾತಾವರಣ ಮನೆಯೊಳಗೆ ಇರುತ್ತೆ. ಕಸದಿಂದ ರಸ ಎಂಬ ಗಾದೆಗೆ ಇದೇ ಉತ್ತಮ ನಿದರ್ಶನ.
Comments