ಧೈರ್ಯ-ಸಾಹಸಕ್ಕೆ ಇನ್ನೊಂದು ಹೆಸರೇ ಡಾ.ಸೀಮಾ ರಾವ್..! ಈಕೆ ಸಾಧನೆ ಜಗತ್ತೆ ಮೆಚ್ಚುವಂತದ್ದು..!!

ಈ ಶತಮಾನಕ್ಕೆ ಮಾದರಿ ಹೆಣ್ಣು.., ಸ್ವಾಭಿಮಾನದ ಪ್ರತೀಕ ಈ ಹೆಣ್ಣು. ಇಂತಹ ಹೆಣ್ಣು ಒಂದು ಕಾಲದಲ್ಲಿ ಮನೆಯಿಂದ ಹೊರಬರುತ್ತಿರಲಿಲ್ಲ. ಪುರುಷ ಪ್ರಧಾನವಾದ ಸಮಾಜದಲ್ಲಿ ಅವಳು ಮೂಲೆಗುಂಪಾಗಿದ್ದಳು. ತನ್ನ ಸ್ವಂತ ಮನೆಯನ್ನ ನಿರ್ವಹಿಸಲು ಸಹ ಗಂಡೊಬ್ಬನನ್ನು ಆಶ್ರಯಿಸುತ್ತಿದ್ದಳು. ಬರು ಬರುತ್ತಾ ಕಾಲ ಬದಲಾದಂತೆ ಸಮಾಜ ಕೂಡ ಬದಲಾಯಿತು. ಲಿಂಗ ತಾರತಮ್ಯ ಎನ್ನುವ ಪಿಡುಗಿನಿಂದ ತತ್ತರಿಸಿ ಹೋಗಿದ್ದ ಮಹಿಳೆಯರಿಗೆ ಕೊಂಚ ಮಟ್ಟಿನ ಸ್ವಾತಂತ್ರ ದೊರೆಯಿತು. ಈ ಬದಲಾವಣೆ ಸಮಾಜದ ಪ್ರಗತಿಗೆ ಕಾರಣವಾಯಿತು.ಇಂದು ಸಮಾಜದ ಪ್ರತಿ ಸ್ತರಗಳಲ್ಲೂ ಹೆಣ್ಣಿದ್ದಾಳೆ. ಮನೆಯಿಂದ ಮಂಗಳನವರೆಗೆ ತಲುಪಿರುವ ಈಕೆ ನಾಡಿಗೆ ತನ್ನದೇ ಆದಾ ಕೊಡುಗೆಗಳನ್ನ ನೀಡುತ್ತಿದ್ದಾಳೆ. ಎಷ್ಟೋ ಪ್ರಥಮಗಳನ್ನ ತಮ್ಮ ಮುಡಿಗೇರಿಸಿಕೊಂಡಿರುವ ಮಹಿಳೆಯರು ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅಂತಹ ಸಾಧಕ ಮಹಿಳೆಯರಲ್ಲಿ ಡಾ. ಸೀಮಾ ರಾವ್ ಕೂಡ ಒಬ್ಬರು.
ಇಂದು ಮಹಿಳಾ ಮಣಿಗಳು ವಿಶ್ವದ ಅತೀ ದೊಡ್ಡ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವ್ರು ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದಾರೆ. ಕೋಟಿಗಳ ವ್ಯವಹಾರವನ್ನು ಸಲೀಸಾಗಿ ಮಾಡಿ ಮುಗಿಸುತ್ತಿದ್ದಾರೆ. ಆದ್ರು ಕೂಡ ಹೆಣ್ಣೆಂದರೇ ಕೊಂಚ ಸಾಫ್ಟ್. ಆಕೆ ದೈಹಿಕವಾಗಿ ವೀಕ್ ಎನ್ನುವ ಮನಸ್ಥಿತಿ ಇನ್ನು ಎಷ್ಟೋ ಜನರ ಮನಸ್ಸಿನಿಂದ ಮಾಸಿಲ್ಲ. ಇಂತಹ ಪ್ರತಿಯೊಂದು ಮಾತುಗಳಿಗೆ ಸೆಡ್ಡು ಹೊಡೆಯುವಂತಿದ್ದಾಳೆ ಈ ನಮ್ಮ ಡಾ. ಸೀಮಾ ರಾವ್.ಹೌದು.., ಸೀಮಾರಾವ್‍ರವ್ರು ಕೊಂಚ ವಿಭಿನ್ನ. ದೈರ್ಯ, ಸಾಹಸಕ್ಕೆ ಮತ್ತೊಂದು ಹೆಸರು ಎನ್ನುವಂತಿರುವ ಇವ್ರು ದೇಶದ ಪ್ರಥಮ ಮತ್ತು ಏಕೈಕ ಕಮಾಂಡೋ ಟ್ರೈನರ್. ಇಲ್ಲಿಯವರೆಗೆ 7 ಡಿಗ್ರಿ ಬ್ಲ್ಯಾಕ್ ಬೆಲ್ಟ್ನ್ನು ಸೀಮಾ ಪಡೆದುಕೊಂಡಿದ್ದಾರೆ. ಏಷ್ಯಾದಲ್ಲಿ ಅತೀ ಹಿರಿಯ ವಯಸ್ಸಿನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ದಾಖಲೆಯೂ ಸೀಮಾ ಹೆಸರಿನಲ್ಲಿದೆ. ಇದಷ್ಟೇ ಅಲ್ಲದೇ ಸೀಮಾರವ್ರು ಕಳೆದ 20 ವರ್ಷಗಳಿಂದ ಭಾರತೀಯ ಸೈನ್ಯಕ್ಕೆ ತರಬೇತಿ ಕೂಡ ನೀಡುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.
ಹಿರಿಯ ಸ್ವತಂತ್ರ ಹೋರಾಟಗಾರರಾದ ರಮಾಕಾಂತ್ ಸಿನಾರಿ ಸೀಮಾ ಅವರ ತಂದೆ. ಇನ್ನು ಸೀಮಾರವ್ರ ಪತಿ ಆರ್ಮಿ ಆಫೀಸರ್. ಹೀಗಾಗಿ ಸೀಮಾಗೆ ಹೋರಾಟದ ಹಿನ್ನಲೆಯ ಜೊತೆ ಬೆಂಬಲವೂ ಸಿಕ್ಕಿತ್ತು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಸೀಮಾ ರಾವ್ ಭಾರತೀಯ ಸೈನ್ಯದ ಜೊತೆ ತರಬೇತಿ ನೀಡುವ ಕೆಲಸ ಮಾಡಿದ್ರು. ಸೀಮಾ ಕಮಾಂಡೋ ಟ್ರೈನಿಂಗ್ ಜೊತೆಗೆ ಶೂಟಿಂಗ್, ಮೌಂಟೇನೇರಿಂಗ್ ಮತ್ತು ಫೈರ್ ಫೈಟಿಂಗ್ನಲ್ಲೂ ಅನುಭವಿ ತರಬೇತುಗಾರ್ತಿಯಾಗಿದ್ದಾರೆ.ದೇಶ ಹಿತಕ್ಕಾಗಿಯೇ ತಮ್ಮ ಪ್ರಾಣವನ್ನ ಮುಡುಪಾಗಿಟ್ಟಿದ್ದ ಸೀಮಾರವ್ರು “ ನನ್ನ ತಂದೆ ನನಗೆ ಮಲಗುವ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಥೆಗಳನ್ನು ಹೇಳುತ್ತಿದ್ದರು. ಇದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆ ಕಥೆಗಳು ನನಗೆ ಸ್ಫೂರ್ತಿ ಆದವು. ಅವರಂತೆಯೇ ಬೆಳೆಯಲು ಆರಂಭಿಸಿದೆ ” ಎಂದು ಹೇಳುತ್ತಾರೆ.ತಮ್ಮ ತಂದೆಯನ್ನೇ ಸ್ಫೂರ್ತಿಯಾಗಿನ್ನಾಗಿಸಿಕೊಂಡು ವಿಶ್ವವೇ ಮೆಚ್ಚುವಂತಹ ಸಾಧನೆ ಮಾಡಿರುವ ಡಾ. ಸೀಮಾರವ್ರುಬ್ರೂಸ್ ಲೀ ಕಂಡು ಹಿಡಿದ ಮಾರ್ಷಿಯಲ್ ಆರ್ಟ್ “ಜೀಟ್ ಕುನ್ ಡೋ”ದಲ್ಲೂ ಎಕ್ಸ್ಪರ್ಟ್. ಈ ವಿದ್ಯೆ ಕಲಿತ ವಿಶ್ವದ 10 ಮಹಿಳೆಯರ ಪೈಕಿ ಸೀಮಾ ಕೂಡ ಒಬ್ಬರು.
ಸಾಹಸಕ್ಕೆ ಹೆಸರುವಾಸಿಯಾದ ಸೀಮಾ ಸಿನಿಮಾ ಕ್ಷೇತ್ರದಲ್ಲೂ ಕೂಡ ಗುರುತಿಸಿಕೊಂಡವರು. ಸಿನಿಮಾದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾದ ಸೀಮಾ “ಹಥಾಪಾಯಿ” ಸಿನೆಮಾ ನಿರ್ಮಾಣ ಮಾಡಿದ್ದರು. ಈ ಸಿನೆಮಾ ಮಿಕ್ಸೆಡ್ ಮಾರ್ಷಿಯಲ್ ಆರ್ಟ್ ವಿಭಾಗದ ಮೊದಲ ಚಿತ್ರ ಅನ್ನುವ ಹೆಗ್ಗಳಿಕೆ ಪಡೆದಿತ್ತು. ಅಷ್ಟೇ ಅಲ್ಲ 2014ರಲ್ಲಿ ಸೀಮಾ ಪ್ರೊಡ್ಯೂಸ್ ಮಾಡಿದ್ದ “ಹಥಾಪಾಯಿ”ಗೆ ಚಿತ್ರರಂಗದ ಅತ್ಯುತ್ತಮ ಪ್ರಶಸ್ತಿಯಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವವೂ ಲಭಿಸಿತು.ಸದ್ಯ ಮಹಿಳೆರಿಗೆ ಆತ್ಮ ರಕ್ಷಣೆಯ ಕಲೆಯನ್ನೂ ಕಲಿಸಿಕೊಡುತ್ತಿರುವ ಸೀಮಾ ಅವರಲ್ಲಿ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ. DARE ಅಂದ್ರೆ Defence Against Rape and Eve Teasing ಎನ್ನುವ ಈ ಕಲೆ ಮುಂಬೈ ಸೇರಿದಂತೆ ಕಾರ್ಪೋರೇಟ್ ವಲಯದಲ್ಲಿ ದೊಡ್ಡ ಹೆಸರು ಮಾಡುತ್ತಿದೆ. ಈ ಮೂಲಕ ಮಹಿಳೆಯರ ಸಾಮಥ್ರ್ಯವನ್ನ ಗುರುತಿಸುವುದರ ಜೊತೆಗೆ ಹೆಚ್ಚಿಸುವ ಕಾರ್ಯ ಮಾಡುತ್ತಿರುವ ಸೀಮಾರವ್ರ ಕಾರ್ಯ ನಿಜಕ್ಕೂಆಗಣೀಯವಾಗಿದ್ದು ಅವರಿಗೊಮ್ಮೆ ಸಲಾಂ ಹೇಳಲೇ ಬೇಕು
Comments