ವಿದ್ಯಾರ್ಥಿಗಳಿಗೆ ಇನ್ಮುಂದೆ ಕಾಲೇಜುಗಳಲ್ಲಿ ಸಿಗಲಿದೆ ಆಧಾರ್ ಕಾರ್ಡ್

ಇನ್ನು ಮುಂದೆ ರಾಜ್ಯದ ಎಲ್ಲಾ ಸರಕಾರಿ ಪ್ರಥಮ ದರ್ಜೆ ಹಾಗೂ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ 'ಆಧಾರ್ ನೋಂದಣಿ ಹಾಗೂ ಅಪ್‌ಡೇಟ್ ಕ್ಯಾಂಪ್'ಗಳನ್ನು ನಡೆಸಿ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಪಡೆದುಕೊಳ್ಳಲು ಅನುಕೂಲ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆ ಈಗಾಗಲೇ ಆದೇಶವನ್ನು ಹೊರಡಿಸಿದೆ.
ಯಾವ ವಿದ್ಯಾರ್ಥಿಗಳು ಆಧಾರ್ ನೋಂದಣಿ ಮಾಡಿಸಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಇಲಾಖೆ, ಹತ್ತಿರದಲ್ಲಿ ಲಭ್ಯವಿರುವ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಂತಹ ಆಧಾರ್ ನೋಂದಣಿ ಕೇಂದ್ರಗಳ ಮೂಲಕ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ತಪ್ಪಿದರೆ, ತಮ್ಮ ಕಾಲೇಜುಗಳಲ್ಲೇ ಆಧಾರ್ ನೋಂದಣಿ ಅಥವಾ ಅಪ್‌ಡೇಟ್ ಕ್ಯಾಂಪ್‌ಗಳನ್ನು ಏರ್ಪಡಿಸುವಂತೆ ತಿಳಿಸಲಾಗಿದೆ ಎಂಬ ಆದೇಶವನ್ನು ಹೊರಡಿಸಿದ್ದಾರೆ.
Comments