ಮೊದಲ ದಸರಾಗೆ ಸಜ್ಜಾದ ಆದ್ಯವೀರ್..!ಈಗ ಹೇಗಿದ್ದಾರೆ ರಾಜ ಮನೆತನದ ರಾಜ

ನಾಡ ಹಬ್ಬ ದಸರಾಗೆ ನಾಡಿನ ಜನತೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.. ಇದರ ಜೊತೆಗೆ ಮತ್ತೊಂದು ಸಂತಸದ ವಿಚಾರವೆಂದರೆ ಮೈಸೂರು ರಾಜ ಮನೆತನಕ್ಕೆ ಹೊಸ ಅತಿಥಿ ಆಗಮನವಾಗಿದೆ .. ಆ ಅತಿಥಿಗೆ ಇದು ಮೊದಲ ದಸರವಾಗಿದೆ. ಒಂದು ಕಡೆ ಗಜಪಡೆಗಳು ಕೂಡ ನಾಡಹಬ್ಬ ದಸರಾಗೆ ಸಜ್ಜಾಗುತ್ತಿದ್ದು, ಮತ್ತೊಂದು ಕಡೆ ಯದುವಂಶದ ಆದ್ಯವೀರ್ ನರಸಿಂಹರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ..
ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಆದ್ಯವೀರ್ ಡಿಸೆಂಬರ್ 6 2017ರಲ್ಲಿ ಜನಿಸಿದ್ದರು.. ಈ ಬಾರಿಯ ದಸರಾ ತುಂಬಾ ವಿಶೇಷವಾಗಿದೆ. ಆದ್ದರಿಂದ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಯೋಗ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಆದ್ಯವೀರ್ ಹುಟ್ಟಿ ಸುಮಾರು ಒಂಭತ್ತು ತಿಂಗಳುಗಳು ಕಳೆದಿವೆ. ಇದುವರೆಗೂ ಅವರ ಫೋಟೋ ಎಲ್ಲಿಯೂ ಲಭ್ಯವಾಗಿರಲಿಲ್ಲ. ಆದರೆ ಈಗ ಅವರು ಹೇಗಿದ್ದಾರೆ ಎಂಬುದನ್ನು ನೀವೆ ನೋಡಿ..
Comments