ಟೂರಿಸಂ ಅಂಬಾಸಿಡರ್ ಆಗಿ ಮೈಸೂರಿನ ಮಹಾರಾಜ ಯದುವೀರ್..!?
ಪ್ರವಾಸೋದ್ಯಮ ಇಲಾಖೆಗೆ ಮೈಸೂರು ಭಾಗದ ಬ್ರಾಂಡ್ ಅಂಬಾಸಿಡರ್ ಆಗುವಂತೆ ಮೈಸೂರಿನ ರಾಜರಾದ ಯದುವೀರ್ ಜೊತೆ ಪ್ರವಾಸೋದ್ಯಮ ಸಚಿವರಾದ ಸಾ ರಾ ಮಹೇಶ್ ಮಾತುಕತೆಯನ್ನು ನಡೆಸಿದ್ದಾರೆ.
ಇಂದು ಮೈಸೂರು ಅರಮನೆಗೆ ಸಾ ರಾ ಮಹೇಶ್ ಭೇಟಿ ನೀಡಿ ಯದುವೀರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಯದುವೀರ್ ಅವರನ್ನ ಬಳಸಿಕೊಂಡು ಪ್ರಚಾರ ಕೈಗೊಳ್ಳುವ ಚಿಂತನೆ ನಡೆಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ, ವಿವಿಧ ವ್ಯಕ್ತಿಗಳನ್ನ ರಾಯಭಾರಿಯಾಗಿ ಆಯ್ಕೆ ಮಾಡಲು ಚಿಂತನೆ ನಡೆಸಲಾಗಿದ್ದು ಈ ವಿಷಯವಾಗಿ ಯದುವೀರ್ ಜೊತೆ ಮಾತುಕತೆಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬ್ರಾಂಡ್ ಅಂಬಾಸಿಡರ್ ವಿಚಾರವಾಗಿ ಮಾತುಕತೆ ನಡೆಸಲು ಬಂದಿದ್ದೆ. ಯದುವೀರ್ ಗೆ ಮನವಿಯನ್ನು ಮಾಡಿದ್ದೇವೆ. ಯದುವೀರ್ ಅವರ ನಿರ್ಧಾರವನ್ನು ಸದ್ಯದಲ್ಲೇ ತಿಳಿಸಲಿದ್ದಾರೆ ಎಂದು ಮೈಸೂರು ಅರಮನೆಯಲ್ಲಿ ಸಚಿವ ಸಾ.ರಾ.ಮಹೇಶ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
Comments