ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: 7275 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಐಬಿಪಿಎಸ್ ಸಂಸ್ಥೆಯು 7275 ಕ್ಲರ್ಕ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.. ಸೆಪ್ಟೆಂಬರ್ 18ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 10,2018 ರವರೆಗೆ ಅರ್ಜಿಯನ್ನು ಭರ್ತಿ ಮಾಡಲು ಸಮಯಾವಕಾಶವಿದೆ.
ಅಭ್ಯರ್ಥಿಗಳು ಐಬಿಪಿಎಸ್ ಅಧಿಕೃತ ವೆಬ್ಸೈಟ್ www.ibps.inನಲ್ಲಿ ಅರ್ಜಿಯನ್ನು ಭರ್ತಿ ಮಾಡಬಹುದಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಕ್ಲರ್ಕ್ ಹುದ್ದೆಗೆ ಅರ್ಜಿಯನ್ನು ತುಂಬಬಹುದಾಗಿದೆ. ಪ್ರಿಲಿಮ್ಸ್ ಪರೀಕ್ಷೆ ಪಾಸ್ ಆದ ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆ ಬರೆಯಬಹುದಾಗಿದೆ. ಎರಡು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಉದ್ಯೋಗವನ್ನು ಪಡೆಯಲಿದ್ದಾರೆ. ಯಾವುದೇ ರೀತಿಯ ಸಂದರ್ಶನವಿರುವುದಿಲ್ಲ. ಪ್ರಿಲಿಮ್ಸ್ ಪರೀಕ್ಷೆ ಡಿಸೆಂಬರ್ 8,9,15 ಮತ್ತು 16 ರಂದು ನಡೆಯಲಿದೆ. ಮುಖ್ಯ ಪರೀಕ್ಷೆ 2019ರಲ್ಲಿ ನಡೆಯಲಿದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಒಟ್ಟು 100 ಅಂಕಗಳ ಪ್ರಶ್ನೆಗಳು ಇರಲಿವೆ.. ಅದಕ್ಕೆ ಒಂದು ಗಂಟೆ ಅವಕಾಶ ನೀಡಲಾಗುವುದು. ಮುಖ್ಯ ಪರೀಕ್ಷೆಯಲ್ಲಿ 190 ಪ್ರಶ್ನೆಗಳಿದ್ದು, 2 ಗಂಟೆ 40 ನಿಮಿಷ ಸಮಯಾವಕಾಶವಿರುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 7200 ರಿಂದ 19300 ರೂಪಾಯಿ ತಿಂಗಳ ವೇತನ ಸಿಗಲಿದೆ. 21 ವರ್ಷ ಮೇಲ್ಪಟ್ಟ ಹಾಗೂ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಮೇಲಿರುವ ವೆಬ್ ವೈಟ್’ಗೆ ಬೇಟಿ ಕೊಟ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು.
Comments