ರಾಜ್ಯ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಬಿಗ್ ಶಾಕ್..!! ಏನ್ ಗೊತ್ತಾ..!?

ಈಗಾಗಗಲೇ ರಾಜ್ಯ ಸರ್ಕಾರವು ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಈಗಾಗಲೇ ಇರುವ ಯೋಜನೆಗಳಿಗೆ ಕತ್ತರಿ ಹಾಕುವ ಕೆಲಸಗಳು ನಡೆಯುತ್ತಿವೆ. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆದ ಸಮಯದಲ್ಲಿ ನೀಡುತ್ತಿದ್ದ ಮಡಿಲು ಕಿಟ್ ಯೋಜನೆಯನ್ನು ರದ್ದು ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
2007 ರಲ್ಲಿ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ನ ಸಹಯೋಗದಲ್ಲಿ ಮಡಿಲು ಕಿಟ್ ನೀಡುವ ಯೋಜನೆಯನ್ನು ಪ್ರಾರಂಭ ಮಾಡಲಾಯಿತು. ಆದರೆ ಈ ವರ್ಷ ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಜ್ಯ ಸರ್ಕಾರ ಮಡಿಲು ಕಿಟ್ ಯೋಜನೆಗೆ ಹಣ ನೀಡಲು ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಸುರಕ್ಷಿತವಾದ ಬಾಣಂತನಕ್ಕೆ ಹೆರಿಗೆ ನಂತರ 3 ತಿಂಗಳವರೆಗೆ ತಾಯಿ ಮಗುವಿಗೆ ಬೇಕಾಗಿದ್ದಂತಹ 19 ಸಾಮಗ್ರಿಗಳಿರುವ ವೈದ್ಯಕೀಯ ಕಿಟ್‍ನ್ನು ತಾಯಿಗೆ ನೀಡಲಾಗುತಿತ್ತು. ಅದರಲ್ಲಿ ಕಾಟನ್ ಡೈಪರ್, ಸ್ಯಾನಿಟರಿ ನ್ಯಾಪ್ಕಿನ್, ಎಣ್ಣೆ ಮತ್ತು ಸೋಪು ಹಾಗೂ ಬೆಲ್ಟ್ ಹಾಗೂ ಬೆಡ್ ಸ್ಪ್ರೆಡ್ ಗಳನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಆ ಯೋಜನೆ ರದ್ದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Comments