‘ಸಲಿಂಗಕಾಮ ಅಪರಾಧವಲ್ಲ’ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು
ಸಲಿಂಗಕಾಮವನ್ನು ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.
ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಐವರು ಅರ್ಜಿದಾರರಾದ ಡ್ಯಾನ್ಸರ್ ನವತೇಜ್ ಜುಹಾರ್, ಪತ್ರಕರ್ತ ಸುನೀಲ್ ಮೆಹ್ರಾ, ಚೆಫ್ ರಿತು ದಾಲ್ಮಿಯಾ, ಹೊಟೇಲ್ ಉದ್ಯಮಿಗಳಾದ ಅಮನ್‌ನಾಥ್, ಕೇಶವ್ ಸೂರಿ, ಬ್ಯುಸಿನೆಸ್ ಎಕ್ಸಿಕ್ಯೂಟಿವ್ ಆಯೇಶಾ ಕಪೂರ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ನೀಡಿದೆ.
Comments