ಅತಿ ಹೆಚ್ಚು ಮಹಿಳಾ ಪೈಲಟ್ಗಳಿರುವ ದೇಶ ಯಾವುದು ಗೊತ್ತೇ ?

ವಿಶ್ವದ ವಾಣಿಜ್ಯ ವಿಮಾನಗಳಲ್ಲಿ ಅತಿ ಹೆಚ್ಚು ಮಹಿಳಾ ಪೈಲೆಟ್ಗಳ ಪೈಕಿ ಶೇಕಡಾ 12 ರಷ್ಟು ಪಾಲನ್ನು ಭಾರತ ಹೊಂದಿದ್ದು ಅತಿ ಹೆಚ್ಚು ಮಹಿಳಾ ಪಯ್ಲ್ಲೆಟ್ಗಳನ್ನು ಹೊಂದಿರುವ ದೇಶವಾಗಿದೆ.
ಅಮೆರಿಕ ಸೇರಿದಂತೆ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿರುವ ಮಹಿಳಾ ಪೈಲಟ್ಗಳಿಗಿಂತ ಹೆಚ್ಚಿನ ಮಹಿಳಾ ಪೈಲಟ್ಗಳು ಭಾರತದಲ್ಲಿದ್ದಾರೆ. ಜಾಗತಿಕವಾಗಿ ಒಟ್ಟು ಪೈಲಟ್ಗಳ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇಕಡ 5ಕ್ಕಿಂತ ಕಡಿಮೆ ಇದೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಆಫ್ ವುಮನ್ ಏರ್ಲೈನ್ ಪೈಲಟ್ಸ್ ಅಂದಾಜಿಸಿದೆ.
ವಿಮಾನಯಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಮುಂದಿನ 20 ವರ್ಷಗಳಲ್ಲಿ 7.9 ಲಕ್ಷ ಪೈಲಟ್ಗಳು ಬೇಕಾಗುತ್ತಾರೆ ಎಂದು ಬೋಯಿಂಗ್ ಕಂಪೆನಿ ಅಂದಾಜು ಮಾಡಿದೆ.
ಕೇಂದ್ರ ಸರ್ಕಾರವು ಕಡ್ಡಾಯ ಪಡಿಸಿದ ಸಮಾನ ವೇತನ, ಸುರಕ್ಷಿತ ಕೆಲಸದ ಸ್ಥಳ, ಡೇ ಕೇರ್ ವ್ಯವಸ್ಥೆ, ಬಹಳಷ್ಟು ಯೋಜನೆಗಳು ಮಹಿಳೆಯರಿಗೆ ಅತಿ ಹೆಚ್ಚು ಅನುಕೂಲವಾಗಿದ್ದೆ ಎಂದು ಜೆಟ್ ಏರ್ವೇಸ್ನಲ್ಲಿ ಹಿರಿಯ ತರಬೇತುದಾರರಾಗಿರುವ ಶ್ವೇತಾ ಸಿಂಗ್ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ
Comments