ಬೈಕ್ ಸವಾರಿಗೊಂದು ಗುಡ್ ನ್ಯೂಸ್ : ಮಾರ್ಕೆಟ್'ಗೆ ಲಗ್ಗೆ ಇಟ್ಟಿದೆ ಎಸಿ ಹೆಲ್ಮೆಟ್

31 Aug 2018 3:23 PM | General
1306 Report

ಬೈಕ್ ಸವಾರರಿಗೆ ಒಂದೆ ಒಂದು ಕಿರಿಕಿರಿ ..ಏನಪ್ಪಾ ಯಾವಾಗಲೂ ಹೆಲ್ಮೆಟ್ ಹಾಕಿಕೊಳ್ಳಬೇಕಲ್ಲ…ಸಿಕ್ಕಾಪಟ್ಟೆ ಸೆಕೆ ಆಗುತ್ತೆ ಏನ್ ಮಾಡೋದು ಅಂತಾ ಯೋಚನೆ ಮಾಡುತ್ತಿರುತ್ತಾರೆ, ಆದರೆ ಇದೀಗ ಬೈಕ್ ಸವಾರಿಗೊಂದು ಸಿಹಿಸುದ್ದಿ ಇದೆ. ಇನ್ನುಮುಂದೆ ಹೆಲ್ಮೆಟ್ ಧರಿಸಿ ಸೆಕೆಯಿಂದ ಕಿರಿಕಿರಿ ಅನುಭವಿಸುವ ಅಗತ್ಯವಿಲ್ಲ. ಏಕೆಂದರೆ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿಯೊಂದು ಎಸಿ ಹೆಲ್ಮೆಟ್ ಅನ್ನು ಈಗಾಗಲೇ ಸಿದ್ಧಪಡಿಸಿದೆ. 

ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯ ಎಂದು ತಿಳಿಸಿದರೂ ಕೂಡ ಕೆಲವರು ಹೆಲ್ಮೆಟ್ ಧರಿಸಿದರೆ ಕಿರಿಕಿರಿಯಾಗುತ್ತದೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸದೇ ಪ್ರಯಾಣ ಬೆಳೆಸಿ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದಕಾರಣ ಇದೀಗ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿ Feher helmet ಎಸಿ ಹೆಲ್ಮೆಟ್ ನ್ನು ಸಿದ್ಧಪಡಿಸಿದೆ. ಮಾರುಕಟ್ಟೆಗೆ ಈ ಎಸಿ ಹೆಲ್ಮೆಟ್ ಕಾಲಿಟ್ಟಿದೆ. ಇದರಿಂದ ಬೇಸಿಗೆಯಲ್ಲೂ ಹೆಲ್ಮೆಟ್ ಧರಿಸಿ ಆರಾಮವಾಗಿ ಬೈಕ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.ಹೊರಗೆ ಹೆಚ್ಚು ಉಷ್ಣತೆ ಇರುವಾಗ ಹೆಲ್ಮೆಟ್ ನಿಮ್ಮ ತಲೆ ಹಾಗೂ ಮುಖದ ಉಷ್ಣತೆಯನ್ನು ಶೇಕಡಾ 10-15 ರಷ್ಟು ಕಡಿಮೆ ಮಾಡುತ್ತದೆಯಂತೆ. ಈ ಎಸಿ ಹೆಲ್ಮೆಟ್ ಗೆ ಯಾವುದೇ ಬ್ಯಾಟರಿ ಅಳವಡಿಕೆ ಮಾಡಿಲ್ಲ.. ಬದಲಾಗಿ ಪವರ್ ಕೋಡ್ ಅಳವಡಿಸಲಾಗಿದೆ. ಈ Feher ACH-1 ಹೆಲ್ಮೆಟ್ ಬೆಲೆ 599 ಡಾಲರ್ ( ಸುಮಾರು 42,240 ರೂ.) ಎಂದು ಹೇಳಲಾಗುತ್ತಿದೆ.

Edited By

Manjula M

Reported By

Manjula M

Comments