ಹೊಸ ಬೈಕ್ ಖರೀದಿಸುವವರಿಗೆ ಇಲ್ಲಿದೆ ಗುಡ್ ನ್ಯೂಸ್...ಏನಂತಿರಾ..?

ಪ್ರತಿಯೊಬ್ಬರಿಗೂ ಕೂಡ ಹೊಸ ಹೊಸ ಕಾರು ತಗೋಬೇಕು ಬೈಕ್ ತಗೋಬೆಕು ಎನ್ನುವ ಆಸೆ ಇರುತ್ತದೆ. ಇನ್ನು ಮುಂದೆ ಹೊಸದಾಗಿ ಬೈಕ್ ಅಥವಾ ಯಾವುದೇ ವಾಹನ ಖರೀದಿ ಮಾಡುವವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಕಾನೂನಿನ ಪ್ರಕಾರ ನಮ್ಮ ದೇಶದಲ್ಲಿ ಓಡಾಡುವ ಎಲ್ಲ ವಾಹನಗಳಿಗೂ ಕೂಡ ವಿಮೆ ಅಥವಾ ಇನ್ಶೂರೆನ್ಸ್ ಕಡ್ಡಾಯವಾಗಿ ಇರಲೇಬೇಕಾಗುತ್ತದೆ. ಆದರೆ ವರ್ಷ ವರ್ಷ ರಿನಿವಲ್ ಮಾಡಿಸುವುದರ ಬಗ್ಗೆ ಯಾರು ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೀಗೆ ಮಾಡಿಕೊಂಡು ವಾಹನ ಮಾಲೀಕರು ಅಪಘಾತ ಸಂದರ್ಭದಲ್ಲಿ ಭಾರಿ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ವಿಮೆ ರಹಿತ ವಾಹನಗಳನ್ನು ನಿಯಂತ್ರಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಮದ್ಯ ಪ್ರವೇಶ ಮಾಡಿ ವಿಮಾ ಕಂಪನಿಗಳು ದೀರ್ಘವಧಿಯ ವಿಮೆಗಳನ್ನು ನೀಡಬೇಕೆಂದು ಆದೇಶವನ್ನು ಹೊರಡಿಸಿದೆ. ಭಾರತದಲ್ಲಿ ಶೇಕಡಾ 50 ಪ್ರತಿಶತ ವಾಹನಗಳು ವಿಮೆ ಇಲ್ಲದೆ ಓಡುತ್ತಿದೆ ಎನ್ನುವ ಮಾಹಿತಿಯ ಆಧಾರದ ಮೆರೆ ಕೋರ್ಟ್ ಮದ್ಯ ಪ್ರವೇಶಿಸಿ ಈ ಎಲ್ಲ ಜನರಲ್ ವಿಮಾ ಕಂಪನಿಗಳಿಗೆ ಪತ್ರವನ್ನು ಬರೆದಿದೆ. ದ್ವಿಚಕ್ರ ವಾಹನಗಳಿಗೆ 5 ವರ್ಷ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 3 ವರ್ಷದ ವಿಮಾ ಪಾಲಿಸಿಗಳನ್ನು ಮಾಡಿಸುವಂತೆ ಆದೇಶವನ್ನು ಹೊರಡಿಸಿದೆ. ಇದರಿಂದ ದೀರ್ಘಾವಧಿಯಲ್ಲಿ ಪ್ರಯೋಜನವಾಗುತ್ತದೆ ಎಂದೂ ಐಆರ್‌ಡಿಎ ಹೇಳಿದೆ. ಇದರಿಂದ ವಾಹನಗಳ ವಿಮಾದಾರರು ಪ್ರತಿ ವರ್ಷ ಪಾಲಿಸಿ ರಿನಿವಲ್ ಮಾಡಿಸುವುದು ತಪ್ಪುತ್ತದೆ, ಹೆಚ್ಚಿನ ವಾಹನಗಳು ವಿಮಾ ವ್ಯಾಪ್ತಿಗೆ ಒಳಪಡಲಿವೆ.
Comments