ಟ್ವಿಟ್ಟರ್, ಫೇಸ್ ಬುಕ್ನಲ್ಲೂ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ..! ಹೇಗೆ ಅಂತಿರಾ…?
ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲವೂ ಡಿಜಿಟಲ್ ಆಗುತ್ತಿದ್ದು, ಡಿಜಿಟಲ್ ಇಂಡಿಯಾದ ಆಶಯಕ್ಕೆ ತಕ್ಕಂತೆ ಗ್ಯಾಸ್ ಕಂಪೆನಿಗಳೂ ಕೂಡ ಡಿಜಿಟಲ್ ಆಗುತ್ತಿದೆ. ಗ್ರಾಹಕ ಸ್ನೇಹಿಯಾಗಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನ ನೀಡುತ್ತಿದೆ. ಗ್ರಾಹಕರು ಇನ್ನು ಮುಂದೆ ತಮ್ಮ ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಗಳನ್ನು ಬಳಸಿ ಗ್ಯಾಸ್ ಸಿಲೀಂಡರ್ ಗಳನ್ನು ಬುಕ್ ಮಾಡಬಹುದಾಗಿದೆ.
ಫೋನ್ ಕರೆ/ ಎಸ್ಎಂಎಸ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಇದಕ್ಕೆ ಪೂರಕವಾಗಿ ಗ್ಯಾಸ್ ಕಂಪೆನಿಗಳು ಇನ್ನಷ್ಟು ಸರಳವಾಗುವಂತಹ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈಗಾಗಲೇ ತಮ್ಮ ಮೊಬೈಲ್ ಮೂಲಕವಾಗಿ ಬುಕ್ ಮಾಡುವುದರ ಜೊತೆಗೆ ಈ ಸಾಮಾಜಿಕ ಜಾಲ ತಾಣಗಳಲ್ಲಿಯೂ ಬುಕ್ ಮಾಡುವ ವ್ಯವಸ್ಥೆಯಿಂದಾಗಿ ಗ್ರಾಹಕರು ಗ್ಯಾಸ್ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದಂತಾಗಿದೆ.
ಫೇಸ್ ಬುಕ್, ಟ್ವಿಟ್ಟರ್ನಲ್ಲಿ ಬುಕ್ ಮಾಡುವುದು ಹೇಗೆ..?
ಫೇಸ್ ಬುಕ್ ಲಾಗಿನ್ ಆಗಿ, ನಂತರ @indianoilcorplimited ಎಂದು ಟೈಪ್ ಮಾಡುವ ಮೂಲಕ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ನ ಅಧಿಕೃತ ಪೇಜ್ಗೆ ಭೇಟಿ ನೀಡಿ. ಆ ಪೇಜ್ನಲ್ಲಿ ಬುಕ್ ನವ್ (book now) ಎನ್ನುವ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಗ್ಯಾಸ್ ಕನೆಕ್ಷನ್ ನಂಬರ್ ಸೇರಿದಂತೆ ಕೆಲ ಮಾಹಿತಿಗಳನ್ನು ನೀಡಿದರೆ ನಿಮ್ಮ ಗ್ಯಾಸ್ ಬುಕ್ ಆಗುತ್ತದೆ.
ಟ್ಡಿಟ್ಟರ್ನಲ್ಲಿ ಬುಕ್ ಮಾಡುವುದು ಹೇಗೆ..?
ಫೇಸ್ ಬುಕ್ ನಂತೆಯೇ ಟ್ವಿಟ್ಟರ್ನಲ್ಲಿಯೂ ಮೊದಲು ಲಾಗಿನ್ ಆಗಬೇಕು ನಂತರ ಬುಕ್ ಮಾಡುವುದಕ್ಕಾಗಿ refill @indanerefill ಎಂದು ಟ್ವಿಟ್ ಮಾಡಬೇಕು. ಒಂದು ವೇಳೆ ನೀವು ಮೊದಲ ಬಾರಿಗೆ ಬುಕ್ ಮಾಡುತ್ತಿದ್ದರೆ, LPGID ಎಂದು ಟ್ವಿಟ್ ಮಾಡಿ ಟ್ವಿಟ್ಟರ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಈ ವಿಧಾನ ಅತ್ಯಂತ ಸರಳವಾಗಿದ್ದು ಸುಶಿಕ್ಷಿತರಿಗೆ ಅನುಕೂಲವಾಗಲಿದೆ.
ಹಳೆಯ ವ್ಯವಸ್ಥೆಯೂ ಇರುತ್ತದೆ…!
ಈಗಾಗಲೇ ಗ್ರಾಹಕರು ಬಳಕೆ ಮಾಡುತ್ತಿರುವ ಫೋನ್ ಮತ್ತು ಎಸ್ ಎಂ ಎಸ್ ಬುಕಿಂಗ್ ಸೇವೆಯೂ ಚಾಲ್ತಿಯಲ್ಲಿರುತ್ತದೆ. ಸಾಂಪ್ರದಾಯಿಕ ಬಳಕೆದಾರರು ಇದರಲ್ಲಿ ಕೂಡ ಬುಕ್ ಮಾಡಬಹುದಾಗಿದೆ. ಇನ್ನು ಈ ಸೇವೆಯನ್ನು ಮುಂದಿನ ದಿನಗಳಲ್ಲಿ ವಾಟ್ಸಾಪ್ಗೂ ವಿಸ್ತರಿಸಲು ಮುಂದಾಗಿದ್ದು ಆ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಒಂದು ಮೊಬೈಲ್ ಇಟ್ಟುಕೊಂಡಿದ್ದರೆ ಸಾಕು ಎಲ್ಲಾ ಕೆಲಸವೂ ಕುಳಿತಲ್ಲಿಯೇ ಆಗುವಂತಹ ವ್ಯವಸ್ಥೆ ಬಂದಿದೆ.
Comments