ನಿಮ್ಮ ಹೊಲಕ್ಕೆ ಉಚಿತವಾಗಿ ಬೋರ್’ವೆಲ್ ಹಾಕಿಸುವುದು ಹೇಗೆ ಗೊತ್ತಾ..!? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..

ಈ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಇತರೆ ಹಿಂದುಳಿದ ವರ್ಗಗಳ ರೈತರಿಗೆ ಸರ್ಕಾರದಿಂದ ಉಚಿತವಾಗಿ ಕೊಳವೆ ಬಾವಿ ಹಾಕಿಸಿ ಕೂಳ್ಳಲು 5 ಎಕರೆ ಒಣ ಭುಮಿ ಹೊಂದಿದ ರೈತರಿಗೆ ಸರ್ಕಾರದಿಂದ ಸಣ್ಣ ಹಾಗು ಅತೀ ಸಣ್ಣ ರೈತರಿಗೆ ಉಚಿತವಾಗಿ ತಮ್ಮ ಜಮಿನಿನಲ್ಲಿ ಬೋರ್ ವೆಲ್ ಗಳನ್ನು ಹಾಕಿಕೊಡಲು ಮುಂದಾಗಿದ್ದು, ಈಗ ಸಣ್ಣ ರೈತರಿಗು ಹಾಗು ಅತೀ ಸಣ್ಣ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರೈತರು ಈ ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಕೊಳವೆಬಾವಿ ಪಡೆಯಬಹುದು. ಅರ್ಜಿ ಆಹ್ವಾನಕ್ಕೆ ಈಗಾಗಲೇ ಕರೆಯಲಾಗಿದ್ದು ನಿಮ್ಮ ಜಿಲ್ಲೆ ಅಥವಾ ತಾಲೂಕಿನ ಬಿಸಿಎಂ ಆಫೀಸಿನಲ್ಲಿ ಪಡೆದುಕೊಂಡು ಅಲ್ಲಿಗೆ ವಾಪಸು ನೀಡಬೇಕಾಗುತ್ತದೆ. ವೈಯುಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯ ವಿವರ ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು. ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದವರಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳು, ಉಪ್ಪಾರ ಅದರ ಉಪ ಸಮುದಾಯಗಳು, ಅಂಬಿಗ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ರೈತರಿಗೆ ಸರ್ಕಾರದಿಂದ ಸಿಗುತ್ತಿರುವ ಪ್ರಯೋಜನಗಳು ಎಲ್ಲರಿಗೂ ಕೂಡ ಉಪಯೋಗವಾಗಲಿ.
Comments