15 ದಿನಗಳ ನಂತರ ಕೊಚ್ಚಿ ಏರ್‌ಪೋರ್ಟ್ ಕಾರ್ಯ ಪುನರಾರಂಭ
ಇತ್ತಿಚಿಗೆ ಕೇರಳದಲ್ಲಿ ಅತೀವೃಷ್ಟಿಯಿಂದಾಗಿ ಸಾಕಷ್ಟು ಸಾವು ನೋವುಗಳು ಸಂಭವಿಸಿದವು.. ಈ ಹಿನ್ನೆಲೆಯಲ್ಲಿ ಆ.14 ರಿಂದ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದ ಕೊಚ್ಚಿಯ ಏರ್‌ಪೋರ್ಟ್‌ನಲ್ಲಿ ಇಂದು ಮಧ್ಯಾಹ್ನ ವಿಮಾನಗಳ ಹಾರಾಟ ಮತ್ತೆ ಪ್ರಾರಂಭವಾಗಿದೆ.
ಮಳೆಯ ಪರಿಣಾಮದಿಂದಾಗಿ ವಿಮಾನ ಹಾರಟ ಸ್ಥಗಿತಗೊಂಡಿತ್ತು. ಪುಣೆಯಿಂದ ಕೊಚ್ಚಿಗೆ ಇಂಡಿಗೊ ವಿಮಾನ ಮಧ್ಯಾಹ್ನ ಕೊಚ್ಚಿ ಏರ್‌ಪೋರ್ಟ್‌ಗೆ ಬಂದಿಳಿದಿದೆ. ಕೊಚ್ಚಿಯ ವಿಮಾನನಿಲ್ದಾಣ ಸುತ್ತಮುತ್ತ ನೆರೆ ನೀರು ಆವರಿಸಿದ್ದ ಕಾರಣ ಸುಮಾರು 2,600 ಮೀ. ಪರಿಧಿಯ ಗೋಡೆ ಕುಸಿದುಬಿದ್ದಿತ್ತು. ಪ್ರವಾಹದಿಂದಾಗಿ ಕೊಚ್ಚಿಯ ಏರ್‌ಪೋರ್ಟ್‌ನಲ್ಲಿ 220 ಕೋಟಿ.ರೂ.ನಷ್ಟ ಸಂಭವಿಸಿದೆ. ಕೊಚ್ಚಿಯ ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ಆ.26ರಂದು ಆರಂಭವಾಗಬೇಕಾಗಿತ್ತು. ಆದರೆ, ಕೆಲವೊಂದು ಕಾರಣದಿಂದಾಗಿ ಮೂರು ದಿನಗಳ ಕಾಲ ಮುಂದೂಡಲಾಗಿತ್ತು.ಇಂದು ಕೊಚ್ಚಿ ಏರ್‌ಪೋರ್ಟ್‌ಗೆ 33 ವಿಮಾನಗಳ ಆಗಮನ ಹಾಗೂ ಇತರ 30 ವಿಮಾನಗಳ ನಿರ್ಗಮನಕ್ಕೆ ವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ.. ಇದರಲ್ಲಿ ದೇಶೀಯ ಹಾಗೂ ಅಂತರ್‌ರಾಷ್ಟ್ರೀಯ ವಿಮಾನಗಳು ಕೂಡ ಸೇರಿಕೊಂಡಿವೆ.
Comments