ರಕ್ಷಾಬಂಧನ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

ವರ್ಷಕ್ಕೆ ಒಂದು ಬಾರಿ ಬರುವ ರಾಖಿ ಹಬ್ಬವನ್ನು ಸಂಭ್ರಮದಿಂದ ಎಲ್ಲರೂ ಆಚರಣೆ ಮಾಡುತ್ತಾರೆ. ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಆಚರಣೆ ಮಾಡುತ್ತಾರೆ.. ಈ ಹಬ್ಬ ಸಹೋದರ-ಸಹೋದರಿಯರ ಸಂಕೇತದ ಹಬ್ಬ ಎಂದೇ ಹೇಳಬಹುದು.
ಪುರಾಣ ಕಥೆಗಳ ಪ್ರಕಾರ ನೋಡುವುದಾದರೆ ಶ್ರೀಕೃಷ್ಣ ಕಬ್ಬು ಕಡಿಯುತ್ತಿರುವ ಸಮಯದಲ್ಲಿ ಕೈ ಬೆರಳಿಗೆ ಗಾಯವಾಗುತ್ತದೆ. ಆಗ ತಕ್ಷಣ ದ್ರೌಪದಿ ತನ್ನ ಸೀರೆಯನ್ನೆ ಹರಿದು, ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ. ದ್ರೌಪದಿಯ ಈ ಉಪಕಾರಕ್ಕೆ ಕೃಷ್ಣ ಸದಾ ನಿನ್ನ ರಕ್ಷಣೆಯನ್ನು ನಾನು ಮಾಡುತ್ತೇನೆಂದು ಮಾತು ಕೊಡುತ್ತಾನೆ. ಹಾಗಾಗಿ ಈ ದಿನವನ್ನು ರಕ್ಷಾಬಂಧನದ ದಿನವೆಂದು ಆಚರಿಸಲಾಗುತ್ತದೆ. ಹಾಗೂ ಈ ದಿನವೇ ಹೆಣ್ಣಮಕ್ಕಳು ತಮ್ಮ ಅಣ್ಣ ತಮ್ಮಂದಿರಿಗೆ ರಕ್ಷಾಬಂಧನವನ್ನು ಕಟ್ಟಿ ಸಂಭ್ರಮಿಸುತ್ತಾರೆ.. ರಕ್ಷಾಬಂಧನದ ಅರ್ಥ ಏನು ಗೊತ್ತಾ..? ಜೀವನಪರ್ಯಂತ ಎಲ್ಲಾ ಕಷ್ಟಗಳಿಂದ ರಕ್ಷಣೆ ಮಾಡುತ್ತೇನೆಂದು ಅಣ್ಣ ತಮ್ಮಂದಿರು ತಮ್ಮ ಸಹೋದರಿಯರಿಗೆ ಕೊಡುವಂತಹ ಮಾತಾಗಿರುತ್ತದೆ. ಮೊದಲು ರಕ್ಷಾಬಂಧನದ ದಿನ ಸಹೋದರರು ತಮ್ಮ ಸಹೋದರಿಯರಿಗೆ ಹಣವನ್ನು ಉಡುಗೊರೆಯಾಗಿ ಕೊಡುತ್ತಿದ್ದರು. ಈಗ ಸಹೋದರ ಸಹೋದರಿಯರಿಬ್ಬರೂ ಒಬ್ಬರಿಗೊಬ್ಬರಿಗೆ ಇಷ್ಟವಾಗುವ ಗಿಫ್ಟ್ಗಳನ್ನು ಕೊಡುತ್ತಾರೆ.
Comments