ವರಮಹಾಲಕ್ಷ್ಮೀ ಹಬ್ಬಕ್ಕೆ ನಿಮ್ಮ ಪೂರ್ವ ಸಿದ್ಧತೆ ಈ ರೀತಿ ಮಾಡಿಕೊಳ್ಳಿ
ಈ ಲೇಖನದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.ವರಮಹಾಲಕ್ಷ್ಮೀ ಪೂಜೆ ಮಾಡೋ ಸಡಗರದಲ್ಲಿ ಕೆಲವೊಮ್ಮೆ ಒಂದೆರಡು ಸಾಮಾನು ಮರೆಯುವ ಸಾಧ್ಯತೆಗಳು ಇರುತ್ತದೆ. ಅಲ್ಲದೇ ಕೆಲವರಿಗೆ ಪೂಜಾ ಸಾಮಾಗ್ರಿಗಳ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅಂತಹವರಿಗೆ ಒಂದಿಷ್ಟು ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿ ಇಲ್ಲಿದೆ ನೋಡಿ.
ವರಮಹಾಲಕ್ಷ್ಮಿ ಪೂಜೆಗೆ ಬೇಕಾಗುವ ಸಾಮಗ್ರಿಗಳು
ತೆಂಗಿನಕಾಯಿ, ಕಲಶ, ಮಣೆ/ಮಂಟಪ, ಆರತಿ ತಟ್ಟೆ, ಸೀರೆ, ರವಿಕೆ ಬಟ್ಟೆ, ನಂದಾ ದೀಪ, ದೀಪದ ಕಂಬ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ.ಅಲಂಕಾರ ಮಾಡಲು ಬೇಕಾಗುವ ಚಿನ್ನ-ಬೆಳ್ಳಿಯ ಆಭರಣಗಳು, ಹಸಿರು ಮತ್ತು ಕೆಂಪು ಗಾಜಿನ ಬಳೆಗಳು.ದೇವರ ವಿಗ್ರಹ, ದೇವರ ಫೋಟೊ, ಪಂಚಪಾತ್ರೆ, ಅರ್ಘ್ಯ ಪಾತ್ರೆ, ನೀರು, ಘಂಟೆ. ಉದ್ದರಣೆ, ಪೂಜಾ ವಿಧಾನ ಇರುವ ಪುಸ್ತಕ, ಅರಿಶಿನ, ಕುಂಕುಮ, ಮಂತ್ರಾಕ್ಷತೆ. ಶ್ರೀಗಂಧ, ಊದಿನ ಕಡ್ಡಿ, ಕರ್ಪೂರ, ಹೂವು, ಕಮಲದ ಹೂವು, ಗೆಜ್ಜೆ, ವಸ್ತ್ರ, ಮಂಗಳಾರತಿ ಬತ್ತಿ, ಧೂಪ. ಪಂಚಾಮೃತ ಅಭಿಷೇಕಕ್ಕೆ – ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ, ಪಚ್ಚ ಕರ್ಪೂರ. ಸಂಪಿಗೆ, ಮಲ್ಲಿಗೆ, ಕಮಲ, ಸೇವಂತಿಗೆ. ವೀಳ್ಯದ ಎಲೆ, ಅಡಿಕೆ, ಬಾಳೆಹಣ್ಣು. ಸೇಬು, ಸೀತಾಫಲ, ದ್ರಾಕ್ಷಿ, ಸಪೋಟ, ಮೂಸಂಬಿ, ಕಿತ್ತಳೆ, ಇತ್ಯಾದಿ.ಪಾಯಸ, ಸಿಹಿ ಅನ್ನ, ಕೋಸಂಬರಿ, ಇತ್ಯಾದಿ
ಶ್ರೀ ವರಮಹಾಲಕ್ಷ್ಮೀ ಹಬ್ಬದ ವಿಶೇಷ ವಿಚಾರಗಳು:
- ವರಮಹಾಲಕ್ಷ್ಮೀ ಹಬ್ಬದ ದಿನ ರಾತ್ರಿ ದಂಪತಿಗಳು “ತಾಂಬೂಲ” ಹಾಕಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.
- ಆದಷ್ಟೂ ಹಸಿರು ಸೀರೆ ಅಥವಾ ರೇಷ್ಮೆಯ ಸೀರೆ ಉಟ್ಟು ಪೂಜೆ ಮಾಡಿ.
- ವಿನಾಯಕನ ಪೂಜೆ, ಯಮುನಾ ಪೂಜೆಯ ನಂತರ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಬೇಕು.
- ವಿನಾಯಕನನ್ನು ಅರಿಶಿನವನ್ನು ಗಟ್ಟಿಯಾಗಿ ಕಲೆಸಿಕೊಂಡು ವಿನಾಯಕನನ್ನು ಮಾಡಬೇಕು.
- ಪೂಜಾ ಸಮಯದಲ್ಲಿ ಕಲಶದ ಬಲಭಾಗ ಇಟ್ಟು ಪೂಜಿಸಬೇಕು.
- ದೂರ್ವಾಗಣಪತಿಯೂ ಅತ್ಯಂತ ಶ್ರೇಷ್ಠ.
- ಕಲಶ ವಿಸರ್ಜನೆಯ ಸಮಯವನ್ನು ಹಿರಿಯರಿಂದ ಅಥವಾ ಗುರುಗಳಿಂದ ತಿಳಿದು ಮಾಡಿ.
- “ಕಲಶದ ಕೆಳಗೆ” ಅಷ್ಟದಳಪದ್ಮ” ರಂಗೋಲಿ ಹಾಕಿ, ಇದು ಅತ್ಯಂತ ಶ್ರೇಷ್ಠ.
ಲಕ್ಷ್ಮೀ ಅನುಗ್ರಹ ಬೇಗ ಆಗುತ್ತದೆ. ಹೀಗೆ ಕ್ರಮಬದ್ಧವಾಗಿ ಪೂಜೆ ಮಾಡಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ.
Comments