ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ ಹೂವು, ಹಣ್ಣಿನ ಬೆಲೆ..!
ಹಿಂದೂ ಧರ್ಮದಲ್ಲಿ ಸಂಪ್ರದಾಯವಾಗಿ ಆಚರಣೆ ಮಾಡುವ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಕೂಡ ಒಂದು. ಈಗಾಗಲೇ ವರಮಹಾಲಕ್ಷ್ಮಿ ಆರಾಧನೆಗೆ ಕ್ಷಣ ಗಣನೆ ಆರಂಭವಾಗಿದೆ. ಲಕ್ಷ್ಮೀ ಅಲಂಕಾರಕ್ಕೆ ಬೇಕಾಗುವ ಸಾಮಾಗ್ರಿಯ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಹಬ್ಬದ ಸೀಜನ್ ನಲ್ಲಿ ಮಾರುಕಟ್ಟೆಗಳಲ್ಲಿ ಹೂ, ಹಣ್ಣು ಕಾಯಿಗಳ ಬೆಲೆ ಗಗನಕ್ಕೇರಿದೆ. ಎಲ್ಲಾ ಬೆಲೆಯು ದುಪ್ಪಟ್ಟಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ..
ಗ್ರಾಹಕರು ಹೂ ಹಣ್ಣಿನ ಬೆಲೆ ಕೇಳಿ ಫುಲ್ ಶಾಕ್ ಆಗಿದ್ದಾರೆ. ಬೆಲೆ ಎಷ್ಟೆಯಾಗಿದ್ರೂ ಕೂಡ ಲಕ್ಷ್ಮಿ ಹೂವಿನ ಅಲಂಕಾರಕ್ಕೆ ಬೇಡದ ಮನಸ್ಸಿನಿಂದ ಹೂವು, ಹಣ್ಣನ್ನು ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುತ್ತಿದ್ದ ಸನ್ನಿವೇಶ ಕಾಣಸಿಗುತ್ತದೆ. ಕನಕಾಂಬರ ಹಾಗೂ ಮಲ್ಲಿಗೆ ಕೆಜಿಗೆ 1,000 ರೂ ಸೇವಂತಿಗೆ ಕೆಜಿಗೆ 800 ರೂ. ಮಲ್ಲಿಗೆ ಹಾರ 500 ರೂ. ಇದರೆ, ಸುಗಂಧ ರಾಜಾ 600 ರೂ. 1 ಕಮಲದ ಹೂ 50 ಮಿಕ್ಸ್ ಹಣ್ಣು ಕೆಜಿಗೆ 200 ರೂ ಗಡಿ ದಾಟಿದೆ. ಒಟ್ಟಾರೆ ಬೆಲೆ ಎಷ್ಟೆ ಜಾಸ್ತಿಯಾದರೂ ಹಬ್ಬ ಮಾಡೊದಂತು ಬಿಡೊಕಾಗಲ್ಲ.
Comments