ಆಗಸ್ಟ್ 23 ರಂದು ಕಾವೇರಿ ನದಿಯಲ್ಲಿ ಅಟಲ್’ಜಿ ಚಿತಾಭಸ್ಮ ವಿಸರ್ಜನೆ

ಮಾಜಿ ಪ್ರಧಾನಿ ವಾಜಪೇಯಿ ಅವರ ಚಿತಾಭಸ್ಮವನ್ನು ಆಗಸ್ಟ್ 23 ರಂದು ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲು ರಾಜ್ಯ ಬಿಜೆಪಿ ಮುಂದಾಗಿದೆ.
ಅಂದು ಮಾಜಿ ಸಿಎಂ ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪಶ್ಚಿಮ ವಾಹಿನಿಯಲ್ಲಿ ಅವರ ಅಸ್ಥಿಯನ್ನ ವಿಸರ್ಜನೆ ಮಾಡಲಾಗುವುದು ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ವಾಜಪೇಯಿ ಅವರ ಕನಸು ಗಂಗಾ ಕಾವೇರಿ ಜೋಡಣೆ. ಹಾಗಾಗಿ ಚಿತಾಭಸ್ಮವನ್ನು ಕಾವೇರಿಯಲ್ಲಿ ಬಿಡಲು ಬಿಜೆಪಿ ಮುಂದಾಗಿದೆ. 23 ರಂದು ಬೆಳಗ್ಗೆ ಜಿಲ್ಲೆಗೆ ಆಗಮಿಸಿ ಚಿತಾಭಸ್ಮವನ್ನು ಜಿಲ್ಲಾ ಗಡಿಭಾಗದಲ್ಲಿ ಸ್ವಾಗತ ಮಾಡಿ, ಮೆರವಣಿಗೆ ಮೂಲಕ ಕಾವೇರಿ ನದಿ ತಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
Comments