ವರುಣನ ಮುಂದಿನ ಟಾರ್ಗೆಟ್ ನಮ್ಮ ಬೆಂಗಳೂರು..!?
ಕೇರಳ ಕೊಡಗಿನಲ್ಲಿ ಉಂಟಾಗಿರುವ ಅತೀವೃಷ್ಟಿಯಿಂದಾಗಿ ಎಲ್ಲರೂ ಭಯಬೀತರಾಗಿದ್ದಾರೆ. ಇನ್ನೂ ರಾಜ್ಯದ ಕೆಲವೆಡೆ ಮಳೆ ಕಡಿಮೆ ಆಗಿಲ್ಲ, ವರುಣನ ಆರ್ಭಟಕ್ಕೆ ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳು ತತ್ತರಿಸಿ ಹೋಗಿವೆ. ಕೇರಳದಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗಿವೆ..
ಇದೆಲ್ಲದರ ನಡುವೆ ಸದ್ಯಕ್ಕೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ಮಳೆಯಾಗುವ ಸಂಭವವು ಕಡಿಮೆಯಿದ್ದು, ಮುಂದಿನ ಸೆಪ್ಟಂಬರ್ ತಿಂಗಳಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಟ್ಟದಲ್ಲಿ ಮಳೆಯಾಗು ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಮುನ್ಸೂಚನೆಯನ್ನು ನೀಡಿದೆ. ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ನಗರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Comments