ನೀವು ಮಾಡಿಕೊಳ್ಳುವ ಮೇಕಪ್ ಬಗ್ಗೆ ಒಂದಿಷ್ಟು ಟಿಪ್ಸ್
ಸೂಕ್ತವಾದ ಬೇಸ್ ಕ್ರೀಮುಗಳು ಅಥವಾ ಬೇಸ್ ಲೋಶನ್ನುಗಳನ್ನು ಬಳಸುವುದು ಮೇಕಪ್ ಹಾಕಿಕೊಳ್ಳಬೇಕಾದರೆ ಗಮನಿಸಬೇಕಾದ ಮೊದಲನೆಯ ಅಂಶವಾಗಿದೆ. ಹೇಗೆ ಕಟ್ಟಡಕ್ಕೆ ಅಡಿಪಾಯ ಗಟ್ಟಿಇದ್ದಾಗ ಮಾತ್ರ ಕಟ್ಟಡದ ಬಾಳಿಕೆ ಹೆಚ್ಚುತ್ತದೆಯೋ ಹಾಗೆಯೇ ಮೇಕಪ್ ನ ಅಡಿಪಾಯ ಬೇಸ್ ಸೂಕ್ತವಾಗಿದ್ದರೆ ನಿಮ್ಮ ಮೇಕಪ್ ಸುಂದರವಾಗಿ ಮೂಡಿಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದಾಗಿದೆ.
ಬೆಳಗಿನ ಸಮಯಕ್ಕೆ ಜಿಡ್ಡು ರಹಿತ ಆರ್ದ್ರಕಾರಿಗಳನ್ನು (ಮಾಯಿಶ್ಚುರೈಸರ್) ಬಳಸುವುದು ಸೂಕ್ತ ಮತ್ತು ಜಿಡ್ಡುರಹಿತ ಫೌಂಡೇಶನ್ ಕ್ರೀಮುಗಳನ್ನು ಬಳಸಿಕೊಳ್ಳಬಹುದು.
ಸೂಕ್ತ ಪ್ರೈಮರ್ ಗಳ ಬಳಕೆ….
ಬಹಳಷ್ಟು ಮಂದಿ ಪ್ರೈಮರ್ ಗಳ ಬಳಕೆಯ ಹಂತವನ್ನು ಅನುಸರಿಸದೇ ಮೇಕಪ್ ನ ಮುಂದಿನ ಹಂತಗಳಿಗೆ ಹೋಗುತ್ತಾರೆ. ಆದರೆ ಮೇಕಪ್ ಬಹಳ ಕಾಲದವರೆಗೂ ಇರಬೇಕೆಂದಾದರೆ ಈ ಹಂತವನ್ನು ಅನುಸರಿಸುವುದು ಸೂಕ್ತವಾದುದು. ಬಹಳ ಲೈಟ್ ಆದ ಜಿಡ್ಡುರಹಿತ ಆರ್ದ್ರಕಗಳನ್ನು ಲೇಪಿಸಿಕೊಂಡು ನಂತರ ಕಾನ್ಸಿಲರ್ ಮತ್ತು ಫೌಂಡೇಶನ್ ಕ್ರೀಮುಗಳನ್ನು ಬಳಸುವುದು ಸರಿಯಾದ ಕ್ರಮವಾಗಿದೆ ಎನ್ನುವುದು ಸೌಂದರ್ಯ ತಜ್ಞರ ಅಭಿಪ್ರಾಯವಾಗಿರುತ್ತದೆ.
ಸ್ಕಿನ್ ಟೋನಿಗೆ ಸೂಕ್ತವೆನಿಸುವ ಕನ್ಸೀಲರ್ ಬಳಕೆ…
ಕಾನ್ಸೀಲರ್ನ ಬಳಕೆ ಸೂಕ್ತವಾಗಿಲ್ಲದಿದ್ದಾಗ ನಿಮ್ಮ ಮುಖದ ಸುಕ್ಕುಗಳು ಮತ್ತು ನೆರಿಗೆಗಳು ಬೇಸಿಗೆಯಲ್ಲಿ ಸುಲಭವಾಗಿ ಕಣ್ಮರೆಯಾಗುವುದಿಲ್ಲ. ದ್ರವ ಕಾನ್ಸೆಲರುಗಳು ಬೇಸಿಗೆಯಲ್ಲಿ ಬಹು ಬೇಗನೆ ಕರಗುವುದರಿಂದ ದ್ರವದ ಬದಲು ಕ್ರೀಮ್ ಕಾನ್ಸೀಲರುಗಳನ್ನು ಬಳಸುವುದು ಹೆಚ್ಚು ಸೂಕ್ತ. ನಿಮ್ಮ ಮುಖದ ಕಪ್ಪು ನೆರಿಗೆಗಳ ಪ್ರದೇಶದಲ್ಲಿ ಕ್ರೀಮನ್ನು ಸ್ವಲ್ಪವೇ ಹಚ್ಚಿಕ್ಕೊಳ್ಳೋದು ( ರಬ್ ಮಾಡಬೇಡಿ) ಉತ್ತಮವಾದ ರೀತಿಯಾಗಿದೆ. ನಂತರ ನಿಧಾನವಾಗಿ ಹರಡುವುದು ಸೂಕ್ತವಾದುದಾಗಿದೆ. ನಿಮ್ಮಲ್ಲಿ ರೆಡ್ ಸ್ಪಾಟ್ ಗಳಿದ್ದರೆ ಸಣ್ಣ ಬ್ರಶ್ ಗಳನ್ನು ಬಳಸಿ ಹಚ್ಚಿಕೊಳ್ಳಿ.
ಮೇಕಪ್ ಸರಳವಾಗಿರಲಿ….
ಆದಷ್ಟು ಕಡಿಮೆ ಫೌಂಡೇಶನ್ ಅನ್ನು ಬಳಸುವುದರಿಂದ ಅವುಗಳು ಮುಖದಿಂದ ಇಳಿದು ಬರುವ ಪ್ರಮಾಣವೂ ತಗ್ಗುತ್ತದೆ. ಆದ್ದರಿಂದ ಡ್ಯಾಂಪನ್ಡ್ ಮೇಕಪ್ ಸ್ಪಾಂಜುಗಳನ್ನು ಫೌಂಡೇಶನ್ ಕ್ರೀಮನ್ನು ಹಚ್ಚಲು ಬಳಸವುದು ಹೆಚ್ಚು ಸೂಕ್ತವಾದುದು. ಇವುಗಳ ಬಳಕೆಯಿಂದ ನಿಮ್ಮ ಮೇಕಪ್ ಲೈಟ್ ಮತ್ತು ತೆಳುವಾಗಿಯೂ ಮೂಡಿಬರುತ್ತದೆ. ಸ್ಪಾಂಜಿನ ಮೇಲೆ ಫೌಂಡೇಶನ್ ಕ್ರೀಮಿನ ಕೆಲವು ಹನಿಗಳನ್ನು ಹಾಕಿಕೊಂಡು ನಿಮ್ಮ ಮುಖದ ಮಧ್ಯಭಾಗದಿಂದ ಆರಂಭಿಸಿ ಹೊರಕ್ಕೆ ಸಣ್ಣ ಸ್ಟ್ರೋಕುಗಳಾಗಿ ಹಚ್ಚಿಕೊಳ್ಳಿ. ನಂತರ ಕೆಲ ಸಮಯ ಹಾಗೆಯೇ ಬಿಡಿ ಫೌಂಡೇಶನ್ ಸೆಟ್ ಆಗಲು ಸ್ವಲ್ಪ ಸಮಯ ಬೇಕಿರುವುದರಿಂದ ನಂತರವೇ ಮೇಕಪ್ಪಿನ ಉಳಿದ ಭಾಗಗಳನ್ನು ಆರಂಭಿಸವುದು ಸರಿಯಾದ ವಿಧಾನವಾಗಿದೆ.
Comments