ಸಂದರ್ಶನದಲ್ಲಿ ಪತ್ರಕರ್ತನೊಬ್ಬ ಭಯೋತ್ಪಾದಕರ ಹಿಟ್ ಲಿಸ್ಟ್ನಲ್ಲಿ ನೀವಿದ್ದೀರಿ ಎಂದಾಗ ಅಟಲ್’ಜಿ ಕೊಟ್ಟ ಉತ್ತರ ಏನ್ ಗೊತ್ತಾ..!?

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 93 ವರ್ಷದ ಇವರು ಅವರು 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ನಂತರದಲ್ಲಿ ಅವರ ಒಂದು ಕಿಡ್ನಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇದರಿಂದಾಗಿ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಅವರು, ಕಳೆದ ಎರಡು ತಿಂಗಳಿನಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಂಸತ್ನಲ್ಲಿ ಸಜ್ಜನ ರಾಜಕಾರಣಿಯಾಗಿದ್ದ ಇವರು ಉತ್ತಮ ವಾಗ್ಮಿಯೂ ಕೂಡ ಆಗಿದ್ದರು ಇವರು ಭಾಷಣ ಮಾಡುತ್ತಿದ್ದರೆ ಆಡಳಿತ ಮತ್ತು ವಿರೋಧ ಪಕ್ಷದವರೂ ಕೂಡ ಕದ್ದಲವಿಲ್ಲದೆ ಕೇಳುತ್ತಿದ್ದರು. ಇಡೀ ದೇಶದುದ್ದಗಲಕ್ಕೂ ಸಂಚರಿಸಿ ಹಿಂದು ಸಿದ್ಧಾಂತದಡಿ ಬಿಜೆಪಿಯನ್ನು ಸಂಘಟಿಸಿ ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ಶ್ರಮಿಸಿದ ಧೀಮಂತ ನಾಯಕ ವಾಜಪೇಯಿ. ಒಮ್ಮೆ ಪತ್ರಕರ್ತರು ಖಾಸಗಿ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ವಾಜಪೇಯಿ ಅವರ ಉತ್ತರ ಕೇಳಿ ನಿಬ್ಬೆರಗಾಗಿದ್ದಾರೆ. ಆ ಪತ್ರಕರ್ತ ವಾಜಪೇಯಿ ಅವರನ್ನು ಭಯೋತ್ಪಾದಕರ ಹಿಟ್ ಲಿಸ್ಟ್ ನಲ್ಲಿ ನೀವಿದ್ದೀರಿ ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳುತ್ತಾನೆ, ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಾರೆ, ಸಾವಿಗೆ ಯಾಕೆ ಹೆದರಬೇಕು ಇಂದಲ್ಲ ನಾಳೆ ಅದು ಬರಲೇಬೇಕು, ಒಂದು ವೇಳೆ ಸಾವು ಆತಂಕವಾದಿಗಳಿಂದ ಸಾವು ಸಂಭವಿಸಿದರೆ ಸಾಯುತ್ತಾ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ, ಸಾದ್ಯವಾದರೆ ಮತ್ತೆ ನನ್ನನ್ನು ಇದೆ ದೇಶದಲ್ಲಿ ಹುಟ್ಟಿಸು, ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿ, ಭಾರತದಿಂದ ಅದನ್ನ ತೊಲಗಿಸಿ ವಿಜಯ ಪಡೆಯುತ್ತೇನೆ ಎಂದಿದ್ದರು.
Comments