ಸಾಲಮನ್ನಾ ಪ್ರಕ್ರಿಯೆಯಲ್ಲಿ ರೈತರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ..!

ಯಾವುದೇ ವಸ್ತುವನ್ನು ಮಾರುವುದಾಗಲಿ ಕೊಳ್ಳುವುದಾಗಲಿ ಅಲ್ಲಿ ಮಧ್ಯವರ್ತಿಗಳ ಪ್ರಭಾವ ಹೆಚ್ಚಾಗಿಯೇ ಇರುತ್ತದೆ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತವೆಯೇ ಹೊರತು, ಕಡಿಮೆಯಾಗುವುದಿಲ್ಲ.. ಇದರಿಂದ ಹೆಚ್ಚು ತೊಂದರೆಗೆ ಒಳಗಾಗುವುದು ನಮ್ಮ ರೈತರೆ..
ಇತ್ತಿಚಿಗಷ್ಟೆ ರಾಜ್ಯ ಸರ್ಕಾರವು ಸಾಲ ಮನ್ನಾ ಮಾಡಲು ಘೋಷಣೆಯನ್ನು ಮಾಡಿದೆ. ಸಾಲಮನ್ನಾ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಕಡಿಮೆ ಮಾಡಲು ನಿರ್ಧರಿಸಿರುವ ಸರ್ಕಾರ ಶೀಘ್ರವೇ ರೈತರಿಗಾಗಿ ಸಹಾಯವಾಣಿವನ್ನು ಪ್ರಾರಂಭಿಸಲಿದೆ. ಸಾಲಮನ್ನಾ ಸಂಬಂಧ ಮಧ್ಯವರ್ತಿಗಳು ಕಮಿಷನ್ ಆಸೆಗಾಗಿ ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದೆ ಎಮದು ಹೇಳಲಾಗಿದೆ.
Comments